ಮನಾಲಿಯಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಅತ್ಯಂತ ಆಕರ್ಷಕ ತಾಣ ಗುಲಾಬಾ. ಆದರೆ ಚಳಿಗಾಲದಲ್ಲಿ ಇಲ್ಲಿ ಬರಲು ಸಾಧ್ಯವೇ ಇಲ್ಲ. ಏಕೆಂದರೆ ಅತಿಯಾದ ಹಿಮಪಾತ ಇಲ್ಲಾಗುತ್ತದೆ. ಬರುವುದು ಕಷ್ಟ. ಇಲ್ಲಿಗೆ ತಲುಪಲು ಮನಾಲಿ-ರೊಹತಂಗ್ ಮಾರ್ಗದಲ್ಲಿ ಸಾಗಬೇಕು. ಈ ಮಾರ್ಗ ಪ್ರತಿವರ್ಷ ಫೆಬ್ರವರಿ ಇಲ್ಲಾ ಮಾರ್ಚ್ ಆರಂಭದವರೆಗೆ ಮಾತ್ರ ಪ್ರವೇಶ ಮುಕ್ತವಾಗಿರುತ್ತದೆ. ನಂತರ ಇಲ್ಲಿಂದ ರೊಹತಂಗ್ ಪಾಸ್ವರೆಗೂ ರಸ್ತೆಯನ್ನು ಹಿಮ ಆವರಿಸಿಕೊಂಡು ಬಿಡುತ್ತದೆ. ಇದನ್ನು ನೋಡುವುದು ಕೂಡ ಅತ್ಯಂತ ವಿಶಿಷ್ಟವಾಗಿರುತ್ತದೆ. ರಾಜಾ ಗುಲಾಬ್ ಸಿಂಗ್ ಕಾಲಾನಂತರ ತಾಣಕ್ಕೆ ಈ ಹೆಸರು ಇಡಲಾಗಿದೆ. ಈತ ಜಮ್ಮು- ಕಾಶ್ಮೀರವನ್ನು ಆಳಿದ ಅರಸು. ಚೈನಾದ ವಿರುದ್ಧ ಯುದ್ಧ ಸಾರಿದ್ದ ಸಂದರ್ಭದಲ್ಲಿ ಇದೇ ತಾಣದಲ್ಲಿ ಕ್ಯಾಂಪ್ ಸಹ ಹೂಡಿದ್ದ ಎನ್ನಲಾಗುತ್ತದೆ.