ಇದು ಹಳೆ ಮನಾಲಿಯ ಭಾಗದಲ್ಲಿದೆ. ಬಿಯಸ್ ನದಿ ದಡದಲ್ಲಿ ಈ ದೇಗುಲ ಇದೆ. ಮುಖ್ಯ ಮಾರುಕಟ್ಟೆ ಪ್ರದೇಶದಿಂದ ಮೂರು ಕಿ.ಮೀ. ದೂರದಲ್ಲಿದೆ. ಪುರಾಣದ ಪ್ರಕಾರ, ಮನುವಿಗೆ ಮೀಸಲಾಗಿರುವ ದೇವಾಲಯಗಳಲ್ಲಿ ಉಳಿದಿರುವುದು ಇದೊಂದೆ. ಹಿಂದೂ ಸಂಪ್ರದಾಯವಾದಿಗಳ ಪ್ರಕಾರ, ಮಾನವನ ಹುಟ್ಟಿಗೆ ಮನುವೇ ಕಾರಣ. ಮನುವು ಇಲ್ಲಿಗೆ ಬಂದಿದ್ದು ಏಳು ತಲೆಮಾರುಗಳ ಹುಟ್ಟು ಹಾಗೂ ಸಾವಿನ ನಂತರ. ಮನಾಲಿ ಕೂಡ, ಆಚರಣೆಯ ದೃಷ್ಟಿಯಿಂದ ಜನಪ್ರಿಯವಾಗಿರುವುದು ಏಳು ನದಿಗಳನ್ನು ದಾಟಿ ಬರಬೇಕಾಗಿರುವುದರಿಂದ. ಸರಳವಾಗಿ ಅಳವಡಿಸಿದ ಕಲ್ಲಿನ ಮೇಲೆ ನಡೆದುಕೊಂಡು ದೇವಾಲಯಕ್ಕೆ ತಲುಪಬೇಕು. ಪ್ರತಿ ಕಲ್ಲಿಗೂ ಅದರದ್ದೇ ಆದ ಧಾರ್ಮಿಕ ನಂಬಿಕೆ ಇದೆ.


Click it and Unblock the Notifications