ನಗರ ಕೇಂದ್ರದ ಪ್ರಮುಖ ಆಕರ್ಷಣೆಯಲ್ಲಿ ಮನಾಲಿ ಝೂ ಕೂಡ ಒಂದು. ಇದು ಹಿಮಾಚಲ ಪ್ರದೇಶದ ರಾಜ್ಯ ಪಕ್ಷಿ ಎಂದೇ ಹೆಸರಾಗಿರುವ ಮೋನಲ್ ಪಕ್ಷಿಯ ವೀಕ್ಷಣೆಗೆ ಸೂಕ್ತ ಸ್ಥಳವಾಗಿದೆ. ಗಂಡು ಮೊನಾಲ್‌ಗಳು ಉದ್ದವಾದ ಹಸಿರು ಗರಿ ಹೊಂದಿರುತ್ತವೆ. ಇದು ಬಹುವರ್ಣದಿಂದ ಕೂಡಿರುತ್ತದೆ. ಹೆಣ್ಣು ಮೋನಾಲ್‌ಗಳು ಕಂದು ಹಾಗೂ ಕಪ್ಪು ಬಣ್ಣದ ಮಿಶ್ರಣವನ್ನು ಒಳಗೊಂಡಿರುತ್ತವೆ. ಅತ್ಯಾಕರ್ಷಕ ಬಣ್ಣ ಹೊಂದಿದ ಕಾರಣಕ್ಕೆ ಬಹು ಬೇಡಿಕೆಯಲ್ಲಿದ್ದ ಗಂಡು ಮೋನಾಲ್‌ಗಳನ್ನು ಬೇಟೆಯಾಡಲಾಗುತ್ತಿತ್ತು. ಆದರೆ 1982 ರ ನಂತರ ಇದರ ಬೇಟೆಯನ್ನು ನಿಷೇಧಿಸಲಾಗಿದೆ. ಮೋನಾಲ್ಸ್ ಹೊರತಾಗಿ ಇನ್ನೂ ಅನೇಕ ಜೀವಿಗಳು ಇಲ್ಲಿವೆ. ಪ್ರಾಣಿ, ಪಕ್ಷಿಗಳ ವೀಕ್ಷಣೆಗೆ ಇದು ಸುಂದರ ತಾಣ.


Click it and Unblock the Notifications