1960 ರಲ್ಲಿ ನಿರ್ಮಾಣವಾಗಿದ್ದು, ಮನಾಲಿ ಗೋಂಪಾ. ಮನಾಲಿಯಲ್ಲಿ ನೆಲೆಸಿದ್ದ ಬುದ್ಧ ಧರ್ಮದ ಅನುಯಾಯಿಗಳ ಧಾರ್ಮಿಕ ಕೇಂದ್ರ ಇದಾಗಿದೆ. ಇಲ್ಲಿ ಬೌದ್ಧ ಧರ್ಮಿಯರು ಸಾಕಷ್ಟಿದ್ದಾರೆ. ಸ್ಪಿತಿ, ಲಡಾಕ್, ಕಿನ್ನೌರ್, ಲಾಹೌಲ್, ಟಿಬೆಟ್, ನೇಪಾಳ ಮತ್ತಿತರ ಕಡೆಗಳಿಂದ ಧರ್ಮ ದರ್ಶನಕ್ಕೆ ಜನ ಇಲ್ಲಿ ಬರುತ್ತಾರೆ. ಇದು ಕಲ್ಲಿನ ಬೆಟ್ಟದ ಮೇಲೆ ಇದ್ದು, ಇಲ್ಲಿನ ಗೋಡೆಗಳ ಮೇಲಿನ ಪೇಂಟಿಂಗ್ ಎಲ್ಲರನ್ನೂ ಬಹುವಾಗಿ ಸೆಳೆಯುತ್ತದೆ. ಅಲ್ಲದೇ ಸ್ತೂಪ ಹಾಗೂ ಬುದ್ಧನ ಬೃಹತ್ ವಿಗ್ರಹ ಆಕರ್ಷಣೀಯವಾಗಿದೆ.


Click it and Unblock the Notifications