ಮನಾಲಿಯಿಂದ 16 ಕಿ.ಮೀ. ದೂರದಲ್ಲಿದೆ ಕೋಠಿ. ಆಕರ್ಷಕ ಸೌಂದರ್ಯ ಒಳಗೊಂಡ ಊರು ಇದು. ಸಮುದ್ರ ಮಟ್ಟದಿಂದ 2500 ಮೀಟರ್ ಎತ್ತರದಲ್ಲಿದೆ. ಕೋಠಿ ಜಾರ್ಜ್ ಇಲ್ಲಿನ ಪ್ರಮುಖ ಆಕರ್ಷಣೆ. ಆಳವಾದ ಜಾರ್ಜ್ ಹಾಗೂ ಬಿಯಸ್ ನದಿಯ ಆಕರ್ಷಕ ನೋಟ ಇದು ನೀಡುತ್ತದೆ. ಮುಖ್ಯ ರಸ್ತೆಯಿಂದ ಒಂದು ಗಂಟೆ ಕಾಲ್ನಡಿಗೆಯಲ್ಲಿ ಸಾಗಿದಾಗ ಈ ತಾಣ ಸಿಗುತ್ತದೆ. ಸಾಗುವ ಮಾರ್ಗದಲ್ಲಿ ಕಲ್ಲು ಬಂಡೆಗಳ ನಡುವಿನಿಂದ ಧಾರೆಯಾಗಿ ಹರಿಯುವ ತೊರೆಗಳು ಸ್ಥಳದ ಆಕರ್ಷಣೆಯನ್ನು ಹೆಚ್ಚಿಸಿವೆ. ಏರೋ ಕ್ರೀಡೆಗೆ ಇದು ಹೆಸರುವಾಸಿ. ಇದು ಆಕರ್ಷಕ ಪ್ಯಾರಾ ಗ್ಲೈಡಿಂಗ್ ನೆಲೆ ಹೊಂದಿದೆ.
ಮೇನಿಂದ ಅಕ್ಟೋಬರ್ ನಡುವಿನ ಅವಧಿ ಇಲ್ಲಿಗೆ ಬರಲು ಸೂಕ್ತ ಕಾಲ. ಕೋಠಿಗೆ ಭೇಟಿ ನೀಡಿದಾಗ ಇಲ್ಲಿಯೇ ಸಮೀಪ ಇರುವ ಸೋಲಾಂಗ ಕಣಿವೆಯನ್ನೂ ಕೂಡ ದರ್ಶಿಸಿ ತೆರಳಬಹುದು.


Click it and Unblock the Notifications