Search
  • Follow NativePlanet
Share
ಮುಖಪುಟ » ಸ್ಥಳಗಳು » ಮಲಪ್ಪುರಂ » ಆಕರ್ಷಣೆಗಳು » ಕಡಲುಂಡಿ ಪಕ್ಷಿಧಾಮ

ಕಡಲುಂಡಿ ಪಕ್ಷಿಧಾಮ, ಮಲಪ್ಪುರಂ

1

ಮಲಪ್ಪುರಂ ಜಿಲ್ಲೆಯಲ್ಲಿ ನೋಡಲೆಬೇಕಾದ ಆಕರ್ಷಣೆಗಳಲ್ಲಿ ಒಂದಾದ ಕಡಲುಂಡಿ ಪಕ್ಷಿಧಾಮವು ಸಣ್ಣ ದ್ವೀಪಗಳ ಉದ್ದಕ್ಕೂ ಹರಡಿಕೊಂಡಿರುವ ಸಿನಿದೃಶ್ಯವಾಗಿದ್ದು, ಇದು ಕಡಲುಂಡಿ ನದಿಯು ಅರೇಬಿಯನ್  ಸಮುದ್ರದಲ್ಲಿ ವಿಲೀನಗೊಳ್ಳುವುದಕ್ಕೆ ಮುಂಚಿತವಾಗಿ ನದಿ ಹಾಗು ಸಮುದ್ರಗಳು ಸಂಧಿಸುವ ಆಯಕಟ್ಟಿನ ಸ್ಥಳದಲ್ಲಿದೆ. ಕಡಲುಂಡಿ ಎಂಬ ಸುಂದರ ಕೊಂಪೆಯಲ್ಲಿ ಅಭಯಾರಣ್ಯವು ನೆಲೆಗೊಂಡಿದ್ದು, ರಸ್ತೆಯ ಮೂಲಕ ಸುಲಭವಾಗಿ ಇದನ್ನು ತಲುಪಬಹುದಾಗಿದೆ.

ಈ ಅಭಯಾರಣ್ಯವು ವಿವಿಧ ವಲಸೆ ಹಕ್ಕಿಗಳ  ಕಾಲೋಚಿತ ನೆಲೆಯಾಗಿದೆ. 200 ಮೀಟರ್ ಎತ್ತರದಲ್ಲಿರುವ ಇದು ತರಂಗವಾಗಿಸುವ ಬೆಟ್ಟಗಳಿಂದ ಸುತ್ತುವರೆಯಲ್ಪಟ್ಟಿದೆ. ಪಕ್ಷಿ ಪ್ರೇಮಿಗಳಿಗಂತೂ ಇದು  ಒಂದು ಮರೆಯಲಾಗದ ಅನುಭವವನ್ನು ನೀಡುತ್ತದೆ. ಮಲಬಾರ್ ಹಾರ್ನ್ ಬಿಲ್ಗಳು, ಮರಕುಟಿಕ, ವ್ಹಿಂಬ್ರೆಲ್ ಗಳು, ನೀರುಕಾಗೆಗಳು, ಕಡಲಕ್ಕಿಗಳು, ಬಕಗಳು, ಸ್ಯಾಂಡ್ ಪಿಪೆರ್ಗಳು, ಪ್ಲೋವರ್, ಮಿಂಚುಳ್ಳಿಗಳು ಮತ್ತು ಬ್ರಾಹ್ಮಿನಿ ಕೈಟ್ಸ್ ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳನ್ನು ಇಲ್ಲಿ ಕಾಣಬಹುದು.

ಅಕ್ಟೋಬರ್ ಮತ್ತು ಮಾರ್ಚ್ ತಿಂಗಳುಗಳು ಅಭಯಾರಣ್ಯ ಭೇಟಿಗೆ ಸೂಕ್ತ ದಿನಗಳಾಗಿವೆ ಅಲ್ಲದೆ ಇಲ್ಲಿ  ಬೋಟಿಂಗ್ ಸೌಲಭ್ಯವೂ  ಲಭ್ಯವಿದೆ . ಪಕ್ಷಿಗಳ ಹೊರತಾಗಿ , ಅಭಯಾರಣ್ಯದಲ್ಲಿ ಮೀನುಗಳು, ಆಮೆಗಳು, ಏಡಿಗಳು ಮತ್ತು ಮಸ್ಸೆಲ್ಸ್ ಸೇರಿದಂತೆ  ವಿವಿಧ ಪ್ರಭೇಧಗಳ ಕಡಲ್ಪ್ರಾಣಿಗಳನ್ನೂ ಕಾಣಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed