ಮಹಾಬಲಿಪುರಂಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಅದು ಚೆನ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಇದು ಮಹಾಬಲಿಪುರಂನಿಂದ 54 ಕಿ.ಮೀ ದೂರದಲ್ಲಿದೆ. ಇದು ಭಾರತದ ಪ್ರಮುಖ ನಗರಗಳು ಮತ್ತು ಶ್ರೀಲಂಕಾ, ದುಬೈ, ಸಿಂಗಾಪುರ್ ಮುಂತಾದ ರಾಷ್ಟ್ರಗಳ ಜೊತೆಗೆ ಉತ್ತಮ ವಿಮಾನ ಸಂಪರ್ಕವನ್ನು ಹೊಂದಿದೆ. ಈ ವಿಮಾನ ನಿಲ್ದಾಣದಿಂದ ಮಹಾಬಲಿಪುರಂಗೆ ಟ್ಯಾಕ್ಸಿಯಲ್ಲಿ ತಲುಪಬಹುದು. ಇವುಗಳ ದರವು ಅಂದಾಜು 1,200 ರೂಪಾಯಿ ಇರುತ್ತದೆ.