ತುಂಗ್ ಕೋಟೆಯನ್ನು ಕಟ್ಟಿದ್ದು ಹೇಗೆಂದರೆ, ಶತ್ರುವಿಗೆ ಯಾವ ದಿಕ್ಕಿನಲ್ಲೂ ತುತ್ತಾಗಬಾರದು ಎಂಬ ದೃಷ್ಟಿಯಿಂದ. ಕಾಂತಿಗಡ್ ರಾಜನಿಂದಾಗಿ ಈ ಕೋಟೆ ಅತ್ಯಂತ ಜನಪ್ರಿಯವಾದ ಮೇಲೆ, ಈ ಪ್ರಾಂತ್ಯವನ್ನು ಆಳಿದ ಹಲವು ಮರಾಠಾ ರಾಜರು ಇಲ್ಲಿನ ಕೋಟೆಯನ್ನು ತಮ್ಮ ಮನೆಯಾಗಿ ಮಾಡಿಕೊಂಡರು. ಸಮುದ್ರ ಮಟ್ಟದಿಂದ ಸುಮಾರು 3500 ಮೀ. ಎತ್ತರದಲ್ಲಿ ಈ ಕೋಟೆಯಿದೆ. ಈ ಕೋಟೆಯ ಮೇಲೆ ಹತ್ತುವುದು ಪ್ರವಾಸಿಗರಿಗೆ ಒಂದು ಚಾಲೆಂಜ್.
ಇದೊಂದು ಅತ್ಯಂತ ಜನಪ್ರಿಯ ಚಾರಣ ಪ್ರದೇಶ. ಒಮ್ಮೆ ನೀವು ಕೋಟೆಯನ್ನು ಹತ್ತಿ ಮೇಲೆ ಹೋದರೆ ಹತ್ತಿ ಹೋದ ಸುಸ್ತು ಮಾಯವಾಗುತ್ತದೆ. ಅಂಥದ್ದೊಂದು ಸುಂದರ ನೋಟ ಇಲ್ಲಿ ನಿಮಗೆ ಲಭ್ಯವಾಗುತ್ತದೆ. ಲಾಲಗಡ್ ಮತ್ತು ವಿಸಾಪುರ ಕೋಟೆಗಳ ಸುಂದರ ನೋಟ ಇಲ್ಲಿಂದ ನಿಮಗೆ ಕಾಣಸಿಗುತ್ತದೆ. ಈ ಕೋಟೆ ಇರುವುದೂ ಲೋಣಾವಲದಲ್ಲೇ.


Click it and Unblock the Notifications