ರಾಜಮಾಚಿ ವನ್ಯಧಾಮವು ದಟ್ಟವಾದ ಕಾಡುಗಳಿಂದ ಕೂಡಿದೆ. ಲೋಣಾವಲದಲ್ಲೇ ಅತ್ಯಂತ ಸುಂದರವಾದ ತಾಣವಿದು. ಪಶ್ಚಿಮ ಘಟ್ಟ ಮತ್ತು ಸಹ್ಯಾದ್ರಿ ಶ್ರೇಣಿಯ ಮಧ್ಯೆ ರಾಜಮಾಚಿ ವನ್ಯಧಾಮವಿದೆ. ಇಲ್ಲಿನ ವನ್ಯ ವೈಶಿಷ್ಟ್ಯವಂತೂ ಅನನ್ಯ. ಪರಿಸರ ಪ್ರಿಯ ಪ್ರವಾಸಿಗರಂತೂ ಇಲ್ಲಿನ ನಿಸರ್ಗ ಸೌಂದರ್ಯದ ಮೋಹಕ್ಕೆ ಒಳಗಾಗಿಬಿಡುತ್ತಾರೆ. ವನ್ಯಮೃಗಗಳು ಇಲ್ಲಿ ಯಥೇಚ್ಛವಾಗಿ ವಿಹರಿಸುತ್ತಿರುತ್ತವೆ.
ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ವಿಶಿಷ್ಟವಾದ ಅಳಿಲು. ಈ ಪರಿಸರವೇ ಪ್ರಾಣಿಗಳಿಗೆ ಹೇಳಿ ಮಾಡಿಸಿರುವಂಥದ್ದು. ಹೀಗಾಗಿ ಪರಿಸರ ಪ್ರಿಯರು ಇಲ್ಲಿ ಚಾರಣ ಮಾಡಬಹುದು, ಬರ್ಡ್ ವಾಚಿಂಗ್ ಮಾಡಬಹುದು.


Click it and Unblock the Notifications