ಭುಲ್ಲಾ ತಾಲ್ ಲಾನ್ಸ್ ಡೌನಿನ ಮೋಜಿನ ಪ್ರವಾಸಿ ಆಕರ್ಷಣೆಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಈ ಕೃತಕ ಸರೋವರವನ್ನು ನಿರ್ಮಾಣದಲ್ಲಿ ನೆರವಾದ ಗಡ್ವಾಲ್ ರೈಫಲ್ಸ್ ಸೈನಿಕರಿಗೆ ಮೀಸಲಿರಿಸಲಾಗಿದೆ. ಈ ಸರೋವರದ ಹೆಸರು ’ಗಡ್ವಾಲಿ’ ಪದ 'ಭುಲ್ಲಾ' ಪದದಿಂದ ಹುಟ್ಟಿಕೊಂಡಿದೆ, ಇದು ’ಕಿರಿಯ ಸಹೋದರ ’ಎಂಬರ್ಥ ಕೊಡುತ್ತದೆ. ಬೋಟಿಂಗ್ ಮತ್ತು ಪೆಡಲಿಂಗ್ ರೀತಿಯ ಚಟುವಟಿಕೆಗಳನ್ನು ಇಲ್ಲಿ ಅನುಭವಿಸಬಹುದು. ಮಕ್ಕಳ ಉದ್ಯಾನ, ಬಿದಿರಿನ ಅಟ್ಟಣೆ ಮತ್ತು ಸರೋವರದ ಆವರಣದಲ್ಲಿ ಹಲವು ಸುಂದರ ಕಾರಂಜಿಗಳು ಇವೆ.


Click it and Unblock the Notifications