ಸ್ಪಂಗಮಿಕ್ವು ಪಂಗೊಂಗ್ ಕೆರೆಯಿಂದ 7 ಕಿ.ಮೀ. ದೂರದಲ್ಲಿದೆ. ಅತ್ಯಂತ ಕುಗ್ರಾಮದಲ್ಲಿ ಇದಿದ್ದು, ಪಂಗೊಂಗ್ ಪ್ರದೇಶ ವ್ಯಾಪ್ತಿಗೆ ಒಳಪಟ್ಟಿದೆ. ಅತ್ಯಂತ ಸುಂದರ ಹಾಗು ಹಿಮದಿಂದ ಅವೃತ್ತವಾದ ಚಂಗ್ ಚೆನೋಮೋ ಹಾಗೂ ಪಂಗೊಂಗ್ ಪರ್ವತ ಶ್ರೇಣಿಗಳನ್ನು ಇಲ್ಲಿಂದ ಕಣ್ತುಂಬಿಕೊಳ್ಳಬಹುದು. ಇಲ್ಲಿನ ಸ್ಪಂಗನಿಕ್ ಹಳ್ಳಿಯಲ್ಲಿ ನಿಂತು ನೋಡಿದಾಗ ಈ ವಿಹಂಗಮ ನೋಟ ಲಭ್ಯವಾಗುತ್ತದೆ. ಇದರ ಜತೆಗೆ ಇನ್ನೂ ಸಾಕಷ್ಟು ಪ್ರವಾಸಿ ತಾಣಗಳನ್ನು, ಹಿಮಾಚ್ಛಾದಿತ ಬೆಟ್ಟಗಳನ್ನು ಇಲ್ಲಿಂದ ಕಾಣಬಹುದಾಗಿದೆ. ಇನ್ನು ಹಳ್ಳಿಗೆ ಸಮೀಪದಲ್ಲೇ ಇರುವ ಪಂಗೊಂಗ್ ಕೆರೆಯ ನೋಟವನ್ನೂ ಸಹ ಆಸ್ವಾದಿಸಬಹುದಾಗಿದೆ.