ಲಡಾಖ್ನ ಅತ್ಯಂತ ಜನಪ್ರಿಯ ತಾಣಗಳಲ್ಲಿ ಮೊನಾಸ್ಟರಿ ಸರ್ಕಿಟ್ ಒಂದು. ಸಾಕಷ್ಟು ಬೌದ್ದ ಗೋಂಪ/ಆಶ್ರಮಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆ. ಫರ್ಕಾ ಆಶ್ರಮ, ತಿಕ್ಸೆ ಆಶ್ರಮ, ಮಾಥೋ ಆಶ್ರಮ ಹಾಗೂ ಹೇಮಿಸ್ ಆಶ್ರಮ ಈ ಭಾಗದಲ್ಲಿವೆ. ಇವುಗಳಲ್ಲಿ ಹೇಮಿಸ್ ಆಶ್ರಮ ಅತ್ಯಂತ ದೊಡ್ಡದು. ಬುದ್ಧನ ಅತಿದೊಡ್ಡ ಮೂರ್ತಿ ಕೂಡ ಇಲ್ಲಿದೆ. ಈ ಮೂರ್ತಿಯ ದರ್ಶನ ಪ್ರತಿ 11 ವರ್ಷಕ್ಕೆ ಒಮ್ಮೆ ಮಾತ್ರ ಭಕ್ತರಿಗೆ ಆಗುತ್ತದೆ. ಇಲ್ಲಿನ ತಾಣವನ್ನು ಅತ್ಯಾಕರ್ಷಕ ಪೇಂಟಿಂಗ್ಗಳಿಂದ ಅಲಂಕರಿಸಲಾಗಿದೆ. ಇನ್ನು ತೀಕ್ಸೆ ಗೊಂಪಾ ಈ ಭಾಗದಲ್ಲಿ ಗುರುತಾದ ಆಶ್ರಮವಾಗಿದೆ. ಇದು 12 ಅಂತಸ್ತಿನ ಕಟ್ಟಡವಾಗಿದ್ದು, ಪ್ರವೇಶದಲ್ಲಿಯೇ ಅತ್ಯಾಕರ್ಷಕ 15 ಮೀಟರ್ ಎತ್ತರದ ಮೂರ್ತಿಯನ್ನು ಒಳಗೊಂಡಿದೆ.