ಸಂಕರ ಗೊಂಪಾವು ಸಂಕರ ಆಶ್ರಮ ಅಂತಲೂ ಜನಪ್ರಿಯವಾಗಿದೆ. ಲೇಹ್ನಿಂದ ಕೇವಲ 3 ಕಿ.ಮೀ. ದೂರದಲ್ಲಿದೆ. ನಡೆದೇ ಇಲ್ಲಿಗೆ ಆರಾಮವಾಗಿ ತಲುಪಬಹುದು. ಅವಲೋಕಿತೇಶ್ವರ ಅಥವಾ ಬೋಧಿಸತ್ವರ ಅತ್ಯಾಕರ್ಷಕ ಮೂರ್ತಿ ಇಲ್ಲಿದೆ. ಎಲ್ಲಾ ಬೌದ್ಧ ಧರ್ಮೀಯರು ಒಂದಾಗಿ ಸೇರಿ ಸಹಧರ್ಮ ಪಾಲನೆ ಮಾಡುತ್ತಾರೆ. ಇಲ್ಲಿರುವ ದೇವರ ಮೂರ್ತಿಗೆ 1000 ತಲೆಯಿದ್ದು,1000 ಕೈ ಹಾಗೂ ಕಣ್ಣುಗಳಿವೆ. ಇದನ್ನು ಸಾಂಪ್ರದಾಯಿಕ ವಾಸ್ತುಶಿಲ್ಪ ಮಾದರಿಯಲ್ಲಿ ನಿರ್ಮಿಸಲಾಗಿದೆ. ನಾಲ್ಕು ದಿಕ್ಕಿನಲ್ಲಿ ಮಾಡಲಾಗಿರುವ ಗೋವರ್ಧನನ ಪೇಂಟಿಂಗ್ ಗಮನ ಸೆಳೆಯುತ್ತದೆ. ಇದು ಗೊಂಪಾದ ಪ್ರವೇಶದಲ್ಲಿಯೇ ಕಾಣಸಿಗುತ್ತದೆ.
ಆಶ್ರಮಕ್ಕೆ ಭೇಟಿ ನೀಡುವ ಸಮಯವನ್ನು ನಿಗದಿಪಡಿಸಲಾಗಿದೆ. ಬೆಳಗಿನ ಜಾವ ಹಾಗೂ ಸಾಯಂಕಾಲದ ನಂತರ ಭೇಟಿಗೆ ಅವಕಾಶ ಇರುತ್ತದೆ. ಕೇವಲ 20 ಮಂದಿ ಏಕಕಾಲಕ್ಕೆ ಒಳಗೆ ನಿಲ್ಲುವಷ್ಟು ಮಾತ್ರ ಸ್ಥಳಾವಕಾಶ ಇಲ್ಲಿದೆ. ಡು-ಕಂಗ್ ಹೆಸರಿನ ಸಮ್ಮೇಳನ ಸಭಾಂಗಣ ಇಲ್ಲಿದೆ. ಆಶ್ರಮದ ಬಾಗಿಲು ತೆಗೆದು ಒಳ ಪ್ರವೇಶಿಸುತ್ತಿದ್ದಂತೆಯೆ ಇದು ಕಾಣುತ್ತದೆ. ಇಲ್ಲಿನ ಗೋಡೆ ಹಾಗೂ ಬಾಗಿಲುಗಳಿಗೆ ಪೇಂಟಿಂಗ್ಗಳು ಅಳವಡಿಕೆಯಾಗಿವೆ. ಟಿಬೇಟಿಯನ್ ಕ್ಯಾಲೇಂಡರ್ ಹಾಗೂ ಮೋಂಕ್ಗಳಿಗೆ ಇರುವ ನಿಯಮಗಳನ್ನು ಇವು ಸಾರುತ್ತವೆ. ದಾಖಲೆಗಳ ಪ್ರಕಾರ, ಆಶ್ರಮವು ಸ್ಪಿಟಿಕ್ ಅಬೋಟ್ ವಸತಿನಿಲಯವಾಗಿತ್ತು. ಇಲ್ಲಿ ಮನೆಯವರ ಜತೆಗೆ ಅತಿಥಿ ಕೊಠಡಿಯೂ ಇದೆ. ಮೇಲ್ಭಾಗದಲ್ಲಿ ಗ್ರಂಥಾಲಯ ಇದೆ.