ಜನರಲ್ ಜೋರಾವರ್ ಕೋಟೆಯು ಲೇಹ್ ಪ್ಯಾಲೇಸ್ ಹಾಗೂ ನಮ್ಯಾಂಗಲ್ ಟೆಸ್ಮೋ ಗೊಂಪಾದ ಮೇಲ್ಭಾಗದಲ್ಲಿ ನೆಲೆಸಿದೆ. ಈ ಅತ್ಯಾಕರ್ಷಕ ಸ್ಮಾರಕವು ರಿಷಿ ಕೋಟೆ ಅಂತಲೂ ಜನಪ್ರಿಯವಾಗಿದೆ. ಜಮ್ಮುವಿನ ದೋಗ್ರಾ ಆಡಳಿತಶಾಹಿಗಳ ರಕ್ಷಣೆಗೆ ಒಂದು ಕಾಲದಲ್ಲಿ ಬದ್ಧವಾಗಿದ್ದ ಇದು ಇಂದು ಶಿಥಿಲಾವಸ್ತೆಯಲ್ಲಿದೆ.
ಹೋರಾಟಗಾರರಲ್ಲಿ ಪ್ರಮುಖರಾದ ಜನರಲ್ ಜೋರಾವರ್ ಸಿಂಗ್ ಸತತವಾಗಿ ಚೈನಾದ ದಾಳಿಯಿಂದ ಬೇಸತ್ತಿದ್ದರು. ಲಡಾಖ್ ಮೇಲೆ ಇವರ ದಾಳಿ ತಗ್ಗಿಸಲು ಈ ಕೋಟೆಯನ್ನು ನಿರ್ಮಿಸಿಕೊಂಡಿದ್ದ. ಪ್ರಸ್ತುತ ಕೋಟೆಯ ಅಂದದ ಜತೆಗೆ ಇಲ್ಲಿ ಸಂಗ್ರಹಿಸಿ ಇಡಲಾಗಿರುವ ಅತಿ ಹೇರಳ ಪ್ರಮಾಣದ ನಾಣ್ಯಗಳು ಹಾಗೂ ಸ್ಟ್ಯಾಂಪ್‌ಗಳ ಸಂಗ್ರಹ ನೋಡುಗರನ್ನು ಸೆಳೆಯುತ್ತದೆ. ಕೋಟೆ ಚೆನಾಬ್ ನದಿಗೆ ಸಮೀಪದಲ್ಲಿದೆ. ಪ್ರಾಚ್ಯವಸ್ತು ಶಾಸ್ತ್ರ, ಪುರಾತನ ಸಂಸ್ಕೃತಿ, ಕಲಾ ಶ್ರೀಮಂತಿಕೆಯನ್ನು ಇಷ್ಟಪಡುವವರು ಈ ಕೋಟೆಯತ್ತ ಬಹುವಾಗಿ ಆಕರ್ಷಿತರಾಗುತ್ತಾರೆ. ಕೋಟೆಯ ಒಳಗೊಂದು ಮಸೀದಿ ಇದೆ. ನೈಸರ್ಗಿಕ ತೊರೆ, ಹಿಂದು ದೇವತೆ ಕಾಳಿ ಹಾಗೂ ದುರ್ಗೆಗೆ ಮೀಸಲಾದ ದೇವಾಲಯಗಳು ಇಲ್ಲಿವೆ.
ಈ ತಾಣವನ್ನು ತಲುಪುವ ವಿಷಯ ಬಂದಾಗ, ಕೋಟೆಯ ಬಾಗಿಲವರೆಗೆ ಪ್ರವಾಸಿಗರು ತಮ್ಮ ವಾಹನ ಕೊಂಡೊಯ್ಯಬಹುದು. ಇಲ್ಲವೇ ಲೇಹ್ ನಗರ ಬಜಾರ್ ಮೂಲಕ ಸಾಗಿ ಟ್ರೆಕ್ಕಿಂಗ್ ಮೂಲಕವೂ ತಲುಪಬಹುದಾಗಿದೆ. ಅತಿ ಕಡಿಮೆ ಅಂತರದ ನಡಿಗೆಯಿಂದ ಕೋಟೆಯನ್ನು ತಲುಪಬಹುದು.


Click it and Unblock the Notifications