Search
  • Follow NativePlanet
Share
ಮುಖಪುಟ » ಸ್ಥಳಗಳು » ಕುರುಕ್ಷೇತ್ರ » ಆಕರ್ಷಣೆಗಳು » ಸ್ಥಾನೇಶ್ವರ್ ಮಹಾದೇವ್

ಸ್ಥಾನೇಶ್ವರ್ ಮಹಾದೇವ್, ಕುರುಕ್ಷೇತ್ರ

1

ಮಹಾದೇವ್ ಶಿವನ ಮತ್ತೊಂದು ಹೆಸರು. ಸ್ಥಾನೇಶ್ವರ್ ಮಹಾದೇವ್ ದೇವಾಲಯದಲ್ಲಿ ಒಂದು ಲಿಂಗವಿದೆ. ಕುರುಕ್ಷೇತ್ರದ ಥಾನೇಶ್ವರದಲ್ಲಿರುವ ಈ ದೇವಾಲಯವು ಪಾಂಡವರ ಕಾಲದ್ದು ಎಂದು ಹೇಳಲಾಗುತ್ತದೆ. ಮಹಾಭಾರತ ಯುದ್ಧಕ್ಕಿಂತ ಮೊದಲು ಪಾಂಡವರು ಕೌರವರ ಮೇಲೆ ಯುದ್ಧದಲ್ಲಿ ಜಯಸಿಗಲೆಂದು ಇಲ್ಲಿನ ದೇವರನ್ನು ಪ್ರಾರ್ಥಿಸಿದ್ದರು ಮತ್ತು ಅದಕ್ಕಾಗಿ ಶಿವನಿಂದ ವರವನ್ನು ಸಹ ಪಡೆದರೆಂದು ತಿಳಿದುಬಂದಿದೆ.

ಸ್ಥಾನೇಶ್ವರ್ ಎಂಬುದು ಚಕ್ರವರ್ತಿ ಹರ್ಷ ವರ್ಧನನ ರಾಜಧಾನಿಯಾಗಿತ್ತು. ಈತನು ಇಲ್ಲಿನ ಸ್ಥಳೀಯ ಶೈಲಿಯಲ್ಲಿ ಗುಮ್ಮಟವನ್ನು ಹೊಂದಿರುವ ಒಂದು ದೇವಾಲಯವನ್ನು ಇಲ್ಲಿ ನಿರ್ಮಾಣ ಮಾಡಿದನು. ಇಲ್ಲಿ ಔಷಧೀಯ ಗುಣಗಳನ್ನು ಹೊಂದಿದೆ ಎಂದು ನಂಬಲಾಗಿರುವ ಒಂದು ಕಲ್ಯಾಣಿಯಿದೆ. ದಂತ ಕತೆಗಳ ಪ್ರಕಾರ ರಾಜ ಬಾನ್‍ನು ಕುಷ್ಠರೋಗದಿಂದ ಬಳಲುತ್ತಿದ್ದಾಗ ಇಲ್ಲಿ ಸ್ನಾನ ಮಾಡಿದನಂತೆ, ಇಲ್ಲಿ ಸ್ನಾನ ಮಾಡಿದ ನಂತರ ಅವನ ಕುಷ್ಠ ರೋಗವು ಗುಣವಾಯಿತು ಎಂದು ಹೇಳಲಾಗುತ್ತದೆ. ಇಲ್ಲಿನ ಸುತ್ತ ಮುತ್ತಲಿನ ಜನರು ತಮ್ಮ ರೋಗರುಜಿನಗಳಿಂದ ವಿಮುಕ್ತಿ ಹೊಂದುವ ಸಲುವಾಗಿ ಈ ಕಲ್ಯಾಣಿಗೆ ಭೇಟಿ ನೀಡುತ್ತಿರುತ್ತಾರೆ.

ನಂಬಿಕೆಗಳ ಪ್ರಕಾರ ಪರಶುರಾಮನು ಇದೇ ಸ್ಥಳದಲ್ಲಿ ಕ್ಷತ್ರಿಯರನ್ನು ಸಂಹಾರ ಮಾಡಿದನೆಂದು ತಿಳಿದುಬಂದಿದೆ. ಈ ಪವಿತ್ರ ಸ್ಥಳಕ್ಕೆ ಸಿಖ್ಖರ ಒಂಬತ್ತನೆಯ ಗುರು ಗುರು ತೇಗ್ ಬಹದ್ದೂರ್ ರವರು ಭೇಟಿ ನೀಡಿದ್ದರು. ಇದರ ನೆನಪಿಗಾಗಿ ಗುರುದ್ವಾರ ನವಿ ಪದ್‍ಶಾಹಿಯನ್ನು ನಿರ್ಮಿಸಲಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue