Search
  • Follow NativePlanet
Share
ಮುಖಪುಟ » ಸ್ಥಳಗಳು » ಕುರುಕ್ಷೇತ್ರ » ಆಕರ್ಷಣೆಗಳು » ಸರಸ್ವತಿ ತೀರ್ಥ

ಸರಸ್ವತಿ ತೀರ್ಥ, ಕುರುಕ್ಷೇತ್ರ

1

ಸರಸ್ವತಿ ತೀರ್ಥವು ಒಂದು ಸಣ್ಣ ಕಲ್ಯಾಣಿಯಾಗಿದೆ.ಇದು ಗುಪ್ತಗಾಮಿಯಾಗಿರುವ, ಒಣಗಿ ಹೋಗಿರುವ ಸರಸ್ವತಿ ನದಿಯ ಹೆಸರನ್ನು ಹೊಂದಿದೆ. ಇದು ಪೆಹೊವಾ ಪಟ್ಟಣದಲ್ಲಿ ನೆಲೆಗೊಂಡಿದೆ. ಇದು ಕುರುಕ್ಷೇತ್ರದಿಂದ 26 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಹಿಂದಿನ ಕಾಲದಲ್ಲಿ ಅಂದರೆ ವೇದಗಳ ಕಾಲದಲ್ಲಿ ಸರಸ್ವತಿ ನದಿಯ ಕಿನಾರೆಯಲ್ಲಿ ನಿರ್ಮಿಸಲಾದ ಅತ್ಯಂತ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿತ್ತು. ವಾಮನ ಪುರಾಣ, ಮಹಾಭಾರತಗಳಲ್ಲಿ ಉಲ್ಲೇಖಿಸಲ್ಪಟ್ಟಿರುವಂತೆ ಕುರುಕ್ಷೇತ್ರವು ಸರಸ್ವತಿ ನದಿಯ ದಕ್ಷಿಣ ದಿಕ್ಕಿಗೆ ಇರುವ ಪಟ್ಟಣವಾಗಿದೆ.

ಈ ತೀರ್ಥವು ಪಿಂಡದಾನ ಮಾಡಲು ಅತ್ಯಂತ ಪವಿತ್ರವಾದ ಸ್ಥಳವೆಂಬ ನಂಬಿಕೆಗೆ ಪಾತ್ರವಾಗಿದೆ. ಹಾಗಾಗಿ ಇಲ್ಲಿ ಶ್ರಾದ್ಧಾದಿ ಕಾರ್ಯಗಳನ್ನು ಮಾಡಲು ಆಗಮಿಸಿದ ಹಲವಾರು ಜನರನ್ನು ನೀವು ಇಲ್ಲಿ ವರ್ಷಪೂರ್ತಿ ನೋಡುತ್ತಿರಬಹುದು. ಸರಸ್ವತಿ ತೀರ್ಥದಲ್ಲಿ ಪ್ರತಿ ವರ್ಷ ಮಾರ್ಚ್- ಏಪ್ರಿಲ್ ತಿಂಗಳುಗಳಲ್ಲಿ ಚೌತ್ರ ಚೌದಸ್ ಮೇಲಾ ಎಂಬ ಧಾರ್ಮಿಕ ಉತ್ಸವವನ್ನು ಮಾಡಲಾಗುತ್ತದೆ. ಒಂದು ಅಂದಾಜಿನ ಪ್ರಕಾರ ಇಲ್ಲಿಗೆ ಆ ಸಮಯದಲ್ಲಿ ಸುಮಾರು ಎರಡು ಲಕ್ಷ ಜನಗಳು ಆಗಮಿಸಿ ತೀರ್ಥ ಸ್ನಾನವನ್ನು ಮಾಡುತ್ತಾರೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu