Search
  • Follow NativePlanet
Share
ಮುಖಪುಟ » ಸ್ಥಳಗಳು » ಕುರುಕ್ಷೇತ್ರ » ಆಕರ್ಷಣೆಗಳು » ಹರ್ಷ್ ಕಾ ಟಿಲಾ

ಹರ್ಷ್ ಕಾ ಟಿಲಾ, ಕುರುಕ್ಷೇತ್ರ

1

ರಾಜಾ ಹರ್ಷ ಕಾ ಟಿಲವು ಒಂದು ಕಿ.ಮೀ.ನಷ್ಟು ಉದ್ದ ಮತ್ತು 750 ಮೀಟರ್ ಅಗಲವಿರುವ ಒಂದು ಮಣ್ಣಿನ ದಿಬ್ಬವಾಗಿದೆ. ಇದು ಕುರುಕ್ಷೇತ್ರ ನಗರದ ಹೊರಭಾಗದಲ್ಲಿ ನೆಲೆಗೊಂಡಿದೆ. ಈ ಪ್ರಾಚೀನ ದಿಬ್ಬವು ಕುಶಾನರಿಂದ ಹಿಡಿದು ಮೊಘಲರ ಕಾಲದವರೆಗಿನ ಅಪರೂಪದ ಐತಿಹಾಸಿಕ ಮಾಹಿತಿಗಳ ಭಂಡಾರವನ್ನು ತನ್ನಲ್ಲಿ ಹೊಂದಿದೆ.

ಇಲ್ಲಿ ನಡೆದ ಉತ್ಖನನದಲ್ಲಿ ಭಾರತೀಯ ಪುರಾತತ್ವ ಸರ್ವೇ ಇಲಾಖೆಯು ಮೊದಲನೆ ಶತಮಾನದಿಂದ ಹಿಡಿದು 19ನೇ ಶತಮಾನದವರೆಗಿನ ಹಲವಾರು ಪ್ರಾಚೀನ ವಸ್ತುಗಳನ್ನು ಹೆಕ್ಕಿ ತೆಗೆದಿದ್ದಾರೆ. ಇವುಗಳಲ್ಲಿ ರಜಪೂತರು, ಗುಪ್ತರು, ಕುಶಾನರು, ಗುಪ್ತರ ನಂತರದ ಕಾಲ, ವರ್ಧಮಾನ, ಸುಲ್ತಾನರು ಮತ್ತು ಮೊಘಲರ ಅವಧಿಯ ವಸ್ತುಗಳು ಸೇರಿವೆ.

ಇವುಗಳಲ್ಲಿ ಕುಶಾನರ ಮತ್ತು ಗುಪ್ತರ ನಂತರದ ಅವಧಿಯ ಕಾಲದ ವಸ್ತುಗಳು ಅತ್ಯಂತ ಪ್ರಮುಖವಾದವುಗಳಾಗಿವೆ. ಇವುಗಳಲ್ಲಿ ಕುಶಾನರ ಕಾಲದ ಬೂದು ಬಣ್ಣದ ಕಲಾವಸ್ತು ಗಮನ ಸೆಳೆಯುತ್ತವೆ. ಇಂತಹವುಗಳು ಗುಪ್ತರ ಅವಧಿಯಲ್ಲಿ ಕೆಂಪು ವರ್ಣದಿಂದ ಕೂಡಿರುತ್ತಿದ್ದವು. ಈ ದಿಬ್ಬದಲ್ಲಿ ಹಲವಾರು ಇಟ್ಟಿಗೆಯ ರಚನೆಗಳು ಸಹ ದೊರೆತಿವೆ. ಈ ರಚನೆಗಳು ಕುಶಾನ ಮತ್ತು ಗುಪ್ತರ ಕಾಲದ್ದೆಂದು ಹೇಳಲಾಗುತ್ತದೆ.

ಇಲ್ಲಿನ ಕೆಲವು ರಚನೆಗಳು ಇಂಡೋ- ಇಸ್ಲಾಮಿಕ್ ಅವಧಿಯದ್ದಾಗಿದೆ. ಇವುಗಳಲ್ಲಿ ಉದ್ಯಾನವನದ ಸಂಕೀರ್ಣ ಮತ್ತು ಕೆಲವೊಂದು ಪುರಾತನ ವಸ್ತುಗಳು ದೊರೆತಿವೆ. ಪುರಾತನ ವಸ್ತುಗಳ ಬಗ್ಗೆ ಒಲವಿರುವವರಿಗೆ  ಹರ್ಷ ಕಾ ಟಿಲ್ಲವು ಹೇಳಿ ಮಾಡಿಸಿದ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
01 Sep,Tue
Return On
02 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
01 Sep,Tue
Check Out
02 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
01 Sep,Tue
Return On
02 Sep,Wed