ವೆಂಕಣ್ಣ ಬಾವಿ ದೇವಸ್ಥಾನ ಕರ್ನೂಲಿನಲ್ಲಿರುವ ಪ್ರಸಿದ್ದ ಪಿಕ್ನಿಕ್ ಸ್ಥಳಗಳಲ್ಲೊಂದು. ಸ್ಥಳೀಯವಾಗಿ ಈ ದೇವಸ್ಥಾನ ಅಷ್ಟೊಂದು ಪ್ರಸಿದ್ದವಾಗಿಲ್ಲ. ಇಲ್ಲಿ ೆರಡು ಮಂದಿರಗಳಿದ್ದು ಒಂದು ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ಶಿವನ ದೇವಸ್ಥಾನ. ನಿಧಿಚೋರರು ವ್ಯರ್ಥಪ್ರಯತ್ನ ನಡೆಸಿದ್ದರಿಂದ ದೇವಸ್ಥಾನ ಧ್ವಂಸಗೊಂಡಿದೆ. ದೇವಸ್ಥಾನದ ಸಮೀಪದಲ್ಲಿಯೇ ಕೊಳವೊಂದಿದ್ದು ಇಲ್ಲಿ ಪೋರ್ಟಿಕೋ ರೀತಿಯ ಕೆತ್ತನೆಗಳಿವೆ. ಇನ್ನೊಂದು ದೇವಸ್ಥಾನ ಬೆಟ್ಟದ ಮೇಲಿದ್ದು, ಬೆಟ್ಟ ಹತ್ತಿ ಅದನ್ನು ತಲುಪುವುದು ಸ್ವಲ್ಪ ಕಷ್ಟ. ಆದರೆ ಬೆಟ್ಟದ ಮೇಲಿನಿಂದ ನೋಡಿದರೆ ಸುಂದರ ದೃಶ್ಯಗಳು ಕಾಣುತ್ತವೆ. ಬೆಟ್ಟ ಹತ್ತಿದ ಕಷ್ಟಕ್ಕೂ ನ್ಯಾಯ ದೊರಕಿದಂತಾಗುತ್ತದೆ. ಸೌಂದರ್ಯದ ಹಿನ್ನೆಲೆಗೆ ಸಾಕ್ಷಿ ದೊರಕುತ್ತದೆ.


Click it and Unblock the Notifications