Search
  • Follow NativePlanet
Share
ಮುಖಪುಟ » ಸ್ಥಳಗಳು » ಕೃಷ್ಣಗಿರಿ » ಆಕರ್ಷಣೆಗಳು » ಥಳಿ

ಥಳಿ, ಕೃಷ್ಣಗಿರಿ

1

ಥಳಿ ಎಂಬುದು ಒಂದು ಪ್ರಶಾಂತವಾದ ಓಯಸಿಸ್‍ನಂತಹ ಹಳ್ಳಿಯಾಗಿದೆ. ಇದನ್ನು "ಪುಟ್ಟ ಇಂಗ್ಲೆಂಡ್" ಎಂದು ಸಹ ಪರಿಗಣಿಸಲಾಗಿದೆ. ಏಕೆಂದರೆ ಇಲ್ಲಿ ಅಸಂಖ್ಯಾತ ಕೆರೆಗಳು, ಗುಡ್ಡಗಳು ಮತ್ತು ಕಣಿವೆಗಳೆಲ್ಲ ಸೇರಿ ನೋಡುಗರ ಮನಸ್ಸನ್ನು ಸೂರೆಗೊಳ್ಳುತ್ತವೆ. ಹೊಸೂರಿನಿಂದ 25 ಕಿ.ಮೀ ದೂರದಲ್ಲಿರುವ ಥಳಿಯು ತಮಿಳುನಾಡು ಮತ್ತು ಕರ್ನಾಟಕದಿಂದ ಉತ್ತಮ ಸಾರಿಗೆ ಸಂಪರ್ಕವನ್ನು ಹೊಂದಿದೆ.

ಥಳಿಯಲ್ಲಿ ಚಾರಣ ಮತ್ತು ಶಿಖರಾರೋಹಣ ಚಟುವಟಿಕೆಗಳು ಭಾರೀ ಪ್ರಸಿದ್ಧಿಯನ್ನು ಪಡೆದಿವೆ. ಇಲ್ಲಿ ಅಸಂಖ್ಯಾತ ಸಂಖ್ಯೆಯಲ್ಲಿರುವ ಬೆಟ್ಟ- ಗುಡ್ಡಗಳು ಚಾರಣಿಗರನ್ನು ಕೈಬೀಸಿ ಕರೆಯುತ್ತಿವೆ. ತಮಿಳುನಾಡಿನಲ್ಲಿ ಬೇಸಿಗೆಯು ಸಹಿಸಲಾಸಾಧ್ಯ. ಆದರೆ ಥಳಿಯಲ್ಲಿ ವರ್ಷಪೂರ್ತಿ ತಣ್ಣನೆಯ ವಾತಾವರಣವಿರುತ್ತದೆ. ಆಗಾಗಿ ಇಲ್ಲಿನ ಹಾಸು ಪಾಸಿನ ಜನರಿಗೆ ಇದು ಒಂದು ಅತ್ಯುತ್ತಮ ಬೇಸಿಗೆಯ ತಾಣವಾಗಿದೆ. ಥಳಿಯು ಬೆಂಗಳೂರು, ಕೃಷ್ಣಗಿರಿ ಮತ್ತು ಹೊಸೂರಿಗೆ ಸಮೀಪದಲ್ಲಿ ನೆಲೆಗೊಂಡಿದೆ. ಹಾಗಾಗಿ ಇದು ಬೆಂಗಳೂರಿನಿಂದ ಕೃಷ್ಣಗಿರಿಗೆ ಸಾಗುವ ಪ್ರವಾಸಿಗರಿಗೆ ವಿಶ್ರಾಂತಿ ತಾಣವಾಗಿ ಸಹ ಕಾರ್ಯನಿರ್ವಹಿಸುತ್ತಿದೆ.

ಇಲ್ಲಿನ ತಣ್ಣನೆಯ, ಪ್ರಶಾಂತ ವಾತಾವರಣದಲ್ಲಿರುವ ಮರಗಿಡಗಳು ವಿಹಾರಾರ್ಥಿಗಳನ್ನು ವಿಹಾರಕ್ಕೆ ಮತ್ತು ವಿಶ್ರಾಂತಿ ಬಯಸುವವರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಪ್ರಕೃತಿಯ  ಜೊತೆಗೆ 1530ರಲ್ಲಿ ಪಾಳಯಕ್ಕಾರರಿಂದ ನಿರ್ಮಾಣಗೊಂಡ ಡೆಂಕಟಿಕೋಟ್ಟೈ ಇತಿಹಾಸ ಆಸಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಇಂದು ಈ ಕೋಟೆಯು ಭಾಗಶಃ ಹಾನಿಗೊಂಡಿದೆ. ಆದರು ಇದರ ಇತಿಹಾಸಕ್ಕೆ ಯಾವುದೇ ಮುಕ್ಕಾಗಲಿಲ್ಲ. ಧಾರ್ಮಿಕ ಆಸಕ್ತರು ತಪ್ಪದೆ ಇಲ್ಲಿನ ವೇಣುಗೋಪಾಲ ಸ್ವಾಮಿಯ ದೇವಾಲಯವನ್ನು ನೋಡಬೇಕು. ಯಾವುದೇ ಋತುವಿರಲಿ ಥಳಿಯು ಪ್ರತಿಯೊಬ್ಬರನ್ನು ತನ್ನತ್ತ ಕರೆಯುತ್ತಿರುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed