ಲೈಟ್ ಹೌಸ್, ಕೊವಲಂ ಪಟ್ಟಣ ಪ್ರದೇಶದಲ್ಲಿ ಸ್ಥಾಪಿತವಾಗಿದ್ದು ಇಲ್ಲಿನ ಐತಿಹಾಸಿಕ ಬದಲಾವಣೆಗೆ ಮೂಕ ಸಾಕ್ಷಿಯಾಗಿದೆ ಈ ಲೈಟ್ ಹೌಸ್. ಅರೇಬಿಯನ್ ಸಮುದ್ರದ ವಿಶಾಲ ಸೊಬಗನ್ನು ಸಮುದ್ರದ ವಿಸ್ತಾರವನ್ನು ನೋಡುವುದಕ್ಕಾಗಿಯೇ ಲೈಟ್ ಹೌಸ್ ಏರಲು ಮುಗಿಬೀಳುತ್ತಾರೆ. ಈ ಲೈಟ್ ಹೌಸ್ ಇಡೀ ದೇಶದಲ್ಲಿಯೇ ಇರುವ ಅತ್ಯಂತ ಸುಂದರವಾದ ನೋಡಲೇ ಬೇಕಾದಂತಹ ಲೈಟ್ ಹೌಸ್ ಆಗಿದೆ. ಇದರ ಆಕರ್ಷಣೆಗೆ ಇನ್ನೊಂದು ಮುಖ್ಯ ಕಾರಣವೆಂದರೆ ಲೈಟ್ ಹೌಸ್, ಬೀಚ್ ಹತ್ತಿರದಲ್ಲಿಯೇ ಇರುವುದು.
ಈ ಲೈಟ್ ಹೌಸ್ ನ್ನು ಕಲ್ಲಿನಿಂದಲೇ ನಿರ್ಮಿಸಲಾಗಿದ್ದು. ಅದಕ್ಕೆ ಕೆಂಪು ಮತ್ತು ಬಿಳಿ ಬಣ್ಣ ಬಳಿಯಲಾಗಿದೆ. ಈ ಲೈಟ್ ಹೌಸ್ 118 ಅಡಿ ಎತ್ತರದ್ಲಲಿದೆ. ಅತ್ಯಂತ ಹಳೆಯದಾದ ಈ ಲೈಟ್ ಹೌಸ್ ಈಗಲೂ ಕಾರ್ಯವನ್ನು ನಿವರ್ಹಿಸುತ್ತಿದ್ದು, ಹಡಗಿನ ಮೂಲಕ ಸಮುದ್ರಯಾನ ಮಾಡುವವರಿಗೆ ಮಾರ್ಗದರ್ಶನ ನೀಡುತ್ತದೆ. 1972 ರಲ್ಲಿ ಇದನ್ನು ಸರಿಯಾಗಿ ಕಾರ್ಯ ನಿರ್ವಹಿಸುವುದಕ್ಕಾಗಿ ಸಜ್ಜುಗೊಳಿಸಲಾಗಿತ್ತು. ಆನಂತರ ಪುನಃ 2003 ರಲ್ಲಿ ಎಮ್/ಸ್ ಬಿಬಿಟಿ ಯವರು ನೀಡಿದ ಆಧುನಿಕ ಉಪಕರಣಗಳನ್ನು ಈ ಲೈಟ್ ಹೌಸ್ ನಲ್ಲಿ ಜೋಡಿಸಲಾಗಿದೆ. ಈ ಲೈಟ್ ಹೌಸ್ ನ್ನು ಎತ್ತರದಲ್ಲಿ / ತುದಿಯಲ್ಲಿ ಹತ್ತಿ ನಿಂತು ನೋಡಿದರೆ ಪರ್ವತಶ್ರೇಣಿ, ಬೆಟ್ಟದ ಸಾಲು, ಶಿಖರ, ಬದು (ಗದ್ದೆಯ ಬದುವಿನಲ್ಲಿ ಬೆಳೆದ ಹುಲ್ಲು), ಮೊಗಡು (ಮಾಡಿನ ಮೊಗಡು) ಇವೆಲ್ಲ್ಲವುಗಳ ನಡುವೆ ಈ ಮೂರು ಬೀಚ್ ಗಳು ಬೇರ್ಪಟ್ಟಿರುವುದನ್ನು ಕಾಣಬಹುದು.
ಇಷ್ಟು ಸೊಬಗನ್ನು ಹೊಂದಿರುವ ಕೊವಲಂ ಪ್ರದೇಶದ ಬಗ್ಗೆ ಸಚಿತ್ರ ವರದಿಯನ್ನು ಕೇಳಿದ ಮೇಲೆ ನೀವು ಹೋಗಲು ತಯಾರಾಗಿದ್ದೀರಲ್ಲವೇ? ಇಲ್ಲಿಗೆ ತಲುಪಲು ಅತ್ಯಂತ್ಯ ಸುಲಭ. ಅದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.


Click it and Unblock the Notifications