Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊವಲಂ » ಆಕರ್ಷಣೆಗಳು » ಸಮುದ್ರ ತೀರ

ಸಮುದ್ರ ತೀರ, ಕೊವಲಂ

2

ಸಮುದ್ರ ಬೀಚ್ ಕೊವಲಂ ನ ಮೂರು ಮುಖ್ಯವಾದ ಬೀಚ್ ಗಳಲ್ಲಿ ಒಂದು.  ಸಮುದ್ರ ಬೀಚ್ ಕರಾವಳಿಯ ಉತ್ತರ ದಿಕ್ಕಿನಲ್ಲಿದೆ. ಇದೂ ಕೂಡಾ ತನ್ನದೇ ಆದ ವಿಶೇಷತೆಗಳನ್ನು ಹೊಂದಿದ್ದರೂ ಹವಾ ಬೀಚ್ ಹಾಗೂ ಲೈಟ್ ಹೌಸ್ ನಷ್ಟು ಪ್ರಮಾಣದಲ್ಲಿ ಪ್ರವಾಸಿಗರನ್ನು ಆಕರ್ಷಿಸುವುದಿಲ್ಲ. ಇದು ದಕ್ಷಿಣ ಹಾಗೂ ಉತ್ತರ ಕರಾವಳಿ ತೀರಗಳ ನಡುವೆ ಪರ್ವತ ಶ್ರೇಣಿಗಳು ಇರುವುದೇ ಇದಕ್ಕೆ ಮೂಲ ಕಾರಣ. ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಬಾರದೇ ಇರುವುದರಿಂದ ಉಳಿದೆರಡು ಬೀಚ್ ಗಳಿಗಿಂತ ಹೆಚ್ಚಾಗಿ ಈ ಕಡಲ ತೀರದಲ್ಲೇ ಸ್ಥಳೀಯರು ಮೀನುಗಾರಿಕೆಯನ್ನು ಮಾಡುತ್ತಾರೆ. ಸುತ್ತಲಿನ ಹಳ್ಳಿಗರಿಗೆ ಇದೊಂದು ಸಣ್ಣ ಉಧ್ಯಮದಂತಾಗಿದೆ.

ಒಂದು ವೇಳೆ ಪ್ರವಾಸಿಗರು ಸಾಹಸಿಗಳಾಗಿದ್ದರೆ  ನಿಮ್ಮ ದೈರ್ಯದ ಮೇಲೆ  ಈ ಪ್ರದೇಶಕ್ಕೆ ಬೋಟಿಂಗ್ ಹಾಗೂ ಈಜಾಡುವುದಕ್ಕೆ ಹೋಗಬಹುದು. ಬಂಡೆಗಳಿಗೆ ಅಪ್ಪಳಿಸಿದ ಅಲೆ ಹಾಗೂ ಸಮುದ್ರದಿಂದ ತೀರಕ್ಕೆ ಅಪ್ಪಳಿಸಿದ ಅಲೆಯಿಂದಾಗಿ ಸಂಗ್ರಹವಾಗುವ ಮೃದುವಾದ ಬಿಳಿಯ ಮರಳಿನಲ್ಲಿ  ನಡೆದರೆ ಮನಸ್ಸಿಗೆ ತುಂಬಾ ಖುಷಿಯಾಗುತ್ತದೆ.  ಅಲ್ಲಿ ಸಮುದ್ರ ಕಿನಾರೆಯ ಪಕ್ಕದಲ್ಲಿ ಕೂತು ಸುಂದರವಾದ  ಸಮುದ್ರ ಅಲೆಗಳನ್ನು ನೋಡುತ್ತಾ ಪ್ರಕತಿಯ ಸೌಂದರ್ಯವನ್ನು ಆಸ್ವಾದಿಸಬಹುದು. ಈ ಕಡಲಿನ ಸುತ್ತಮುತ್ತ  ತೆಂಗಿನ ಮರಗಳು ಹಾಗೂ ಪಾಮ್ ಮರಗಳು ಹೇರಳವಾಗಿದೆ. ಇದು ಇಲ್ಲಿನ ಸೊಬಗನ್ನು ಹೆಚ್ಚಿಸಿ ನಿಮ್ಮ ಪ್ರಯಾಣವನ್ನು ಮೌಲ್ಯಯುತವನ್ನಾಗಿಸುವುದರಲ್ಲಿ ಎರಡು ಮಾತಿಲ್ಲ.

ಸಮುದ್ರ ಬೀಚ್ ಗೆ ಹೊಂದಿಕೊಂಡಂತೆ ಅಶೋಕ ಬೀಚ್ ನ್ನು ಕೂಡಾ ಕಾಣಬಹುದು ಆದರೆ ಇದು ಸಮುದ್ರ ಬೀಚ್ ನಂತೆಯೇ ಪ್ರವಾಸಿಗರಿಗೆ ಹೆಚ್ಚು  ಆಕರ್ಷಣೀಯವೆನಿಸಿಲ್ಲ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon