ಕೊಟ್ಟಾಯಂನಿಂದ ಸುಮಾರು 70 ಕಿ.ಮೀ. ದೂರದಲ್ಲಿ ಕೊಟ್ಟಾತವಾಲಂ ಇದೆ. ಕುರಿಸುಮಾಲ ಪ್ರದೇಶದ ಮುರುಗನ್ ಬೆಟ್ಟಗಳಲ್ಲಿ ಈ ಸುಂದರವಾದ ಗುಹೆ ಇದೆ. ಕೊಟ್ಟಾಯಂ ಪ್ರವಾಸೋದ್ಯಮದಲ್ಲಿ ಈ ಗುಹೆ ಅತ್ಯಂತ ಆಕರ್ಷಣೀಯ ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿದೆ. ಈ ಗುಹೆಯಲ್ಲಿ ಬಂಡೆಗಳಿಂದ ಮಾಡಿದ ಮೇಲ್ಛಾವಣಿ ಇದೆ. ಪೀಠೋಪಕರಣಗಳು ಹಾಗೂ ಹಿಂದಕ್ಕೆ ಒರಗಿಕೊಳ್ಳುವ ಕುರ್ಚಿಗಳು ಸುಂದವಾದ ಕಲಾಕೃತಿಗಳಿಂದ ಅಲಂಕರಿಸುರುವುದನ್ನು ಇಲ್ಲಿ ಕಾಣಬಹುದು. ದೇವಾನು ದೇವತೆಗಳಾದ ಅಯ್ಯಪ್ಪ, ಮುರುಗ, ಮದುರೇ ಮೀನಾಕ್ಷಿ ಹಾಗೂ ಕನಕಿಯ ಚಿತ್ರಗಳನ್ನು ಇಲ್ಲಿ ಬಿಡಿಸಲಾಗಿದೆ. ಮದುರೈ ಸಂಸ್ಥಾನದ ಮಹಾರಾಜರ ಕುಟುಂಬ ಪೂಂಜಾರಿಗೆ ಪ್ರಯಾಣ ಮಾಡುವಾಗ ಈ ಪ್ರದೇಶದಲ್ಲಿ ಕೆಲ ದಿನಗಳು ತಂಗುತ್ತಿದ್ದರು ಎಂಬ ಐತಿಹಾಸ ಹೇಳುತ್ತದೆ.
ಮಲಯಾಳಂ ಭಾಷೆಯಲ್ಲಿ 'ಕೊಟ್ಟಾ' ಎಂಬ ಪದದ ಅರ್ಥ ಕೋಟೆ ಹಾಗೂ 'ವಾಲಂ'ಎಂದರೆ ಎತ್ತರವಾದ ಪ್ರದೇಶ. ಹಾಗಾಗಿ ರಾಜ ಮನೆತನದವರು ತಂಗುತ್ತಿದ್ದ ಗುಹೆ ಬೆಟ್ಟಗಳಲ್ಲಿದ್ದರಿಂದ ಈ ಪ್ರದೇಶಕ್ಕೆ ಕೊಟ್ಟಾತವಾಲಂ ಎಂಬ ಹೆಸರು ಬಂದಿದೆ. ಹಚ್ಚ ಹಸಿರನ್ನು ಮೇಲೆ ಹೊದ್ದಿಕೊಂಡಿರುವ ಬೆಟ್ಟಗಳ ಹಿನ್ನೆಲೆಯಲ್ಲಿ ಈ ಪ್ರದೇಶ ಸುಂದರವಾಗಿ ಕಂಗೊಳಿಸುತ್ತದೆ. ಪ್ರತೀ ವರ್ಷ ಕೊಟ್ಟಾತಾವಾಲಂ ಪ್ರದೇಶಕ್ಕೆ ಸಾವಿರಾರುಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ.


Click it and Unblock the Notifications