ಕೊಲ್ಲಂ ಜಿಲ್ಲೆಯ ಪ್ರಮುಖ ಪಟ್ಟಣದಲ್ಲಿ ಒಂದು ಪಥಾನಪುರಂ. ಪಶ್ಚಿಮ ಘಟ್ಟ ಅರಣ್ಯ ಪ್ರದೇಶ ವ್ಯಾಪ್ತಿಗೆ ಇದು ಬರುತ್ತದೆ. ಪುನಲೂರಿನಿಂದ ಈ ಪ್ರದೇಶ 13 ಕಿ.ಮೀ. ದೂರದಲ್ಲಿದೆ. ರಸ್ತೆ ಮಾರ್ಗದಲ್ಲಿ ಆರಾಮವಾಗಿ ತಲುಪಬಹುದು. ದಟ್ಟ ಅರಣ್ಯ ಹಾಗೂ ಆನೆಗಳ ಆವಾಸ ತಾಣವಾಗಿ ಇದು ಗುರುತಾಗಿದೆ. ಸಾಕಷ್ಟು ಆನೆಗಳು ಇಲ್ಲಿ ಕಾಣಸಿಗುತ್ತವೆ. ಈ ಪಟ್ಟಣದ ಹೆಸರಿನ ಅರ್ಥ ಗಮನಿಸಿದಾಗ ಇದು "10 ಆನೆಗಳ ಭೂಮಿ' ಎಂದಾಗುತ್ತದೆ.
ಇದು ವಾಣಿಜ್ಯ ಕೇಂದ್ರವಾಗಿ ಉತ್ತಮ ಹೆಸರು ಹೊಂದಿದೆ. ಪಥಾನಪುರಂನಲ್ಲಿ ಸಾಕಷ್ಟು ಕಾಟೇಜ್ ಹಾಗೂ ಸಣ್ಣ ಕೈಗಾರಿಕೆಗಳು ಹೇರಳ ಪ್ರಮಾಣದಲ್ಲಿವೆ. ಇವು ಮುಖ್ಯವಾಗಿ ಇಟ್ಟಿಗೆ ನಿರ್ಮಾಣ, ಹೈನುಗಾರಿಕೆ, ಕುರಿ ಉಣ್ಣೆ ಮತ್ತಿತರವುಗಳಿಗೆ ಸಂಬಂಧಿಸಿದ ಕಾರ್ಯ, ಬೆತ್ತ ಹಣೆಯುವುದು ಇತ್ಯಾದಿ ಕಾರ್ಯದಲ್ಲಿ ತೊಡಗಿದ್ದಾರೆ. ರಬ್ಬರ್ ಸಂಬಂಧಿ ಕೈಗಾರಿಕೆಯೂ ಇಲ್ಲಿ ಇದೆ.
ಕಲ್ಲಾಡ ನದಿ ತೀರದಲ್ಲಿ ಈ ಪ್ರದೇಶ ಸ್ಥಾಪಿತವಾಗಿದೆ. ನೈಸರ್ಗಿಕ ಸೌಂದರ್ಯ ಇಲ್ಲಿ ತುಂಬಿ ತುಳುಕುತ್ತಿದೆ. ಈ ನಗರವೂ ಸಾಕಷ್ಟು ಚರ್ಚ್ ಗಳು, ದೇವಾಲಯಗಳು ಹಾಗೂ ಸಾಕಷ್ಟು ಮಸೀದಿಗಳನ್ನೂ ಒಳಗೊಂಡಿದೆ. ಉತ್ಸವಗಳು ಇಲ್ಲಿ ಸಾಕಷ್ಟು ಆಗುತ್ತದೆ. ಈ ಆಚರಣೆ ಪಟ್ಟಣದ ಇನ್ನೊಂದು ಮುಖವನ್ನು ಪ್ರದರ್ಶಿಸುತ್ತದೆ. ಪೆರಿಯಾರ್ ಪಾರ್ಕ್ ನಗರದ ಪ್ರಮುಖ ಆಕರ್ಷಣೆ. ಜತೆಗೆ ಇದು ಪಥಾನಪುರಂನ ಗಡಿ ಪ್ರದೇಶವೂ ಹೌದು. ಇಲ್ಲಿನ ಇನ್ನಿತರ ಪ್ರಮುಖ ಅಕರ್ಷಣೆ ವಜಾಪ್ಪರಾ ಜಲಪಾತ, ಪುನಲೂರು ತೂಗು ಸೇತುವೆ, ಕಲ್ಲಾಡ ನದಿ, ಅಂಚುಮಾಲಾ ಪರ ಇತ್ಯಾದಿ.


Click it and Unblock the Notifications