ಎಲ್ಕ್ ಜಲಪಾತವು ಕೋತಗಿರಿಯಿಂದ 7ಕಿ.ಮೀ. ದೂರದಲ್ಲಿದೆ. ಎಲ್ಕ್ ಎಂಬ ಪ್ರಾಣಿಯ ಹೆಸರು ಹೊಂದಿದ್ದರೂ ನಿಮಗೆಲ್ಲೂ ಎಲ್ಕ್ ಪ್ರಾಣಿಗಳ ಹಿಂಡು ಕಾಣಸಿಗದು. ನೀವು ಜಲಪಾತದ ಹತ್ತಿರ ಹೋಗುತ್ತಿದ್ದಂತೆ ನಿಮಗೆ ಬ್ರಿಟೀಷರ ಕಾಲದ ಬಂಗಲೆ ಸ್ವಾಗತಿಸುವುದು. ಮಳೆಗಾಲದಲ್ಲಿ ಇಲ್ಲಿಗೆ ಬಂದರೆ ಚೆನ್ನಾಗಿರುವುದು, ಹತ್ತಿರದ ಕೂಕಲ್ ಕಣಿವೆಯಲ್ಲಿ ಕಿತ್ತಳೆ ಬಣ್ಣದ ಹೂಗಳು ಅರಳುತ್ತವೆ. ಈ ಜಲಪಾತವು ಉಯಿಲಾತಿ ಗ್ರಾಮದ ಹತ್ತಿರವಿದೆ. ಹರಿಯುವ ಝರಿ ಮತ್ತು ಭೋರ್ಗರೆಯುವ ಪಾತ ಎರಡೂ ಸೇರಿದ ಕಾರಣ ಸ್ವರ್ಗದಂತೆ ಅನಿಸುವುದು.


Click it and Unblock the Notifications