ಜಗಮಂದಿರ್ ಅರಮನೆಯು ಕೃತಕವಾಗಿ ನಿರ್ಮಿಸಲಾಗಿರುವ ಕಿಶೋರ್ ಸಾಗರ್ ಕೆರೆಯ ನಡುವೆ ಸುಂದರವಾದ ಪ್ರಶಾಂತ ವಾತಾವರಣದಲ್ಲಿ ನೆಲೆಸಿದೆ. ಈ ಕೆರೆಯನ್ನು ಬುಂಡಿಯ ಯುವರಾಜ ಡೆಹ್ರಾ ಡೆಹ್ 1346ರಲ್ಲಿ ನಿರ್ಮಿಸಿದರೆ, ಅರಮನೆಯನ್ನು ಕೋಟಾದ ರಾಣಿಯೊಬ್ಬಳು 1740ರಲ್ಲಿ ನಿರ್ಮಿಸಿದಳು. ಈ ಅರಮನೆಯನ್ನು ಸುಂದರವಾದ ಕೆಂಪು ಮರಳುಗಲ್ಲುಗಳಿಂದ ನಿರ್ಮಿಸಲಾಗಿದ್ದು, ನೋಡಲು ಅತ್ಯದ್ಭುತವಾಗಿದೆ. ಪ್ರವಾಸಿಗರು ಇಲ್ಲಿನ ಕೆರೆಯಲ್ಲಿ ದೋಣಿ ವಿಹಾರವನ್ನು ಮಾಡುವಾಗ ಅಲ್ಲಿನ ತಿಳಿಯಾದ ನೀರಿನಲ್ಲಿ ಅರಮನೆಯ ಪ್ರತಿಬಿಂಬವನ್ನು ಕಾಣಬಹುದು. ಕೋಟಾವನ್ನು ಆಳಿದ ರಾಜರು ಈ ಅರಮನೆಯನ್ನು ವಿಶ್ರಾಂತಿ ಪಡೆಯಲು ನಿರ್ಮಿಸಿದ್ದರು. ಈ ಅರಮನೆಗೆ ಸಮೀಪದಲ್ಲಿ ರಾಜರ ಸ್ಮಾರಕಗಳಿಗೆ ಹೆಸರುವಾಸಿಯಾಗಿರುವ ಕೇಶರ್ ಬಾಗ್ ಎಂಬ ಸ್ಥಳವಿದೆ.


Click it and Unblock the Notifications