ರಾಮಚಂಡಿ ದೇವಸ್ಥಾನವು ಒಡಿಸ್ಸಾದ ಪುರಿ ಜಿಲ್ಲೆಯಲ್ಲಿದೆ. ಇದು ಕೋನಾರ್ಕ ದಿಂದ 5 ಕೀಲೊ ಮೀಟರ ದೂರದಲ್ಲಿದೆ. ಈ ದೇವಾಲಯದಲ್ಲಿ ಪ್ರಾಂತೀಯ ದೇವರಾದ ರಾಮಚಂಡಿಯವರನ್ನು ಬಹು ಗೌರವ ಪೂರ್ವಕವಾಗಿ ಆರಾಧಿಸಲಾಗುತ್ತದೆ.
ಈ ದೇವಸ್ಥಾನವು ಸಮ್ಮೋಹನಗೊಳಿಸುವ ಕುಸಭದ್ರ ಎಂಬ ನದಿಯ ತೀರದಲ್ಲಿ ಇದ್ದು, ಪುರಿಯ ಪ್ರಸಿದ್ದ ಶಕ್ತಿ ಪೀಠಗಳಲ್ಲಿ ಇದು ಒಂದು ಎಂದು ಹೆಸರುವಾಸಿಯಾಗಿದೆ. ಈ ದೇವಸ್ಥಾನದ ಮುಖ್ಯವಾದ ಭಾಗವನ್ನು ಎತ್ತರದ ವೇದಿಕೆಯಲ್ಲಿ ನಿರ್ಮಿಸಲಾಗಿದೆ. ಈ ದೇವಸ್ಥಾನದ ಮೂರು ಗೋಡೆಗಳು ದಕ್ಷಿಣ, ಪಶ್ಚಿಮ ಮತ್ತು ಉತ್ತರ ದಿಕ್ಕಿನಲ್ಲಿದ್ದು ಸೂರ್ಯ ದೇವರ ಚಿತ್ರಗಳನ್ನು ಒಳಗೊಂಡಿದೆ.
ದೇವಸ್ಥಾನದ ಗರ್ಭ ಗುಡಿಯೊಳಗೆ ದೇವತೆ ಚಂಡಿಯ ಕಮಲದ ಮೇಲೆ ಕುಳಿತಿರುವಂತಹ ಆಕರ್ಷಕವಾದ ಪ್ರತಿಮೆ ಇದೆ. ಈ ದೇವಸ್ಥಾನವು ಕೋನಾರ್ಕನ ಸೂರ್ಯ ದೇವಸ್ಥಾನಕ್ಕಿಂತ ಪುರಾತನವಾದುದು ಎಂಬ ನಂಬಿಕೆ ಇದೆ. ರಾಮಚಂಡಿ ಕಡಲ ತೀರವು ನೋಡಲು ತುಂಬಾ ರುದ್ರ ರಮಣಿಯವಾಗಿದ್ದು ಯಾವಾಗಲೂ ಜನಜಂಗುಳಿಯಿಂದ ತುಂಬಿ ಕೊಂಡಿರುತ್ತದೆ. ಇಲ್ಲಿ ಜನರು ತಮ್ಮ ಕುಟುಂಬ ಮತ್ತು ಗೆಳೆಯರೊಂದಿಗೆ ವಿಹಾರಕ್ಕೆಂದು ಬರುತ್ತಾರೆ. ಕಡಲ ತೀರದ ಆನಂದವನ್ನು ಅನುಭವಿಸುತ್ತಾರೆ. ಈ ನಯನ ಮನೋಹರ ಕಡಲ ತೀರವು ಪ್ರೇಮಿಗಳ ಗುಟ್ಟಾದ ಪ್ರಣಯಕ್ಕೂ ಸೂಕ್ತವಾಗಿದೆ.