Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋನಾರ್ಕ್ » ಆಕರ್ಷಣೆಗಳು » ಚೌರಾಸಿ

ಚೌರಾಸಿ, ಕೋನಾರ್ಕ್

1

ಚೌರಾಸಿಯು ಒಂದು ಸಣ್ಣ ನಗರವಾಗಿದ್ದು ಪ್ರಾಚಿ ನದಿಯ ಬಲ ತೀರದ ಮೇಲೆ ನೆಲೆಗೊಂಡಿದೆ. ಈ ಸ್ಥಳವು ದೇವಾಲಯಗಳಿಗೆ ಪ್ರಸಿದ್ದವಾಗಿದೆ. ಇಲ್ಲಿ ಬರಾಹಿ, ಅಮರೇಶ್ವರ ಮತ್ತು ಲಕ್ಷ್ಮಿ ನಾರಾಯಣ ದೇವಸ್ಥಾನಗಳು ಇಲ್ಲಿವೆ. ಬರಾಹಿಯನ್ನು ವರಾಹಿ ಎಂದು ಸಹ ಕರೆಯಲಾಗುತ್ತದೆ. ಇದು ಇಲ್ಲಿನ ಮಾತೃ ದೇವತೆಯ ಹೆಸರು.

ಈ ದೇವಸ್ಥಾನವನ್ನು ಕ್ರಿ. ಪೂ ಹತ್ತನೇ ಶತಮಾನದ ಆರಂಭದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದ ಪ್ರಮುಖ ದೇವತೆ ವರಾಹಿ ದೇವತೆ. ಈ ದೇವತೆಯು ಹಂದಿಯ ಮುಖ ಮತ್ತು ಡೊಳ್ಳು ಹೊಟ್ಟೆಯನ್ನು ಹೊಂದಿರುವಂತೆ ಚಿತ್ರಿಸಲಾಗಿದೆ. ಈ ದೇವತೆಯು ಒಂದು ಕೈಯಲ್ಲಿ ಮೀನನ್ನು ಮತ್ತು ಇನ್ನೊಂದು ಕೈಯಲ್ಲಿ ಬಟ್ಟಲನ್ನು ಹಿಡಿದಿದ್ದಾಳೆ. ಈ ದೇವತೆಯು ತನ್ನ ಹಣೆಯ ಮೇಲೆ ಮೂರನೇಯ ಕಣ್ಣನ್ನು ಹೊಂದಿದ್ದಾಳೆ. ಈ ದೇವತೆಯನ್ನು ತಾಂತ್ರಿಕ ಆಚರಣೆಗಳ ಪ್ರಕಾರ ಪೂಜಿಸಲಾಗುತ್ತದೆ.

ಈ ದೇವಸ್ಥಾನವನ್ನು ಭವ್ಯವಾದ ವಾಸ್ತುಶಿಲ್ಪ ವಿನ್ಯಾಸದಿಂದ ಅದ್ದೂರಿಯಾಗಿ ಅಲಂಕರಿಸಲಾಗಿದೆ. ಈ ದೇವಾಲಯವು ಉನ್ನತ ಮಟ್ಟದಲ್ಲಿ ಆಯಾತಾಕಾರದ ಮುಖ ಮಂಟಪವನ್ನು ಹೊಂದಿದೆ. ಬರಾಹಿ ದೇವತೆಗೆ ಪ್ರತಿನಿತ್ಯವು ಮೀನನ್ನು ನೈವೇದ್ಯವನ್ನಾಗಿ ಸಮರ್ಪಿಸಲಾಗುತ್ತದೆ. ಇದನ್ನು  ನೋಡಲು ಪ್ರವಾಸಿಗರು, ಭಕ್ತರು, ಮತ್ತು ಜನರು ಗುಂಪುಗುಂಪಾಗಿ ಬರುತ್ತಾರೆ. ಇಲ್ಲಿರುವ ಇತರ ದೇವಾಲಯಗಳೆಂದರೆ ಲಕ್ಷ್ಮಿ ನಾರಾಯಣ ದೇವಸ್ಥಾನ ಮತ್ತು ಅಮರೇಶ್ವರ ದೇವಸ್ಥಾನ. ಇವುಗಳು ಕೂಡ ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳಾಗಿವೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon