Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋನಾರ್ಕ್ » ಹವಾಮಾನ

ಕೋನಾರ್ಕ್ ಹವಾಮಾನ

ಅಕ್ಟೋಬರ್ ನಿಂದ ಮಾರ್ಚ್ ತಿಂಗಳಿನವರೆಗೂ ಕೋನಾರ್ಕ ನಗರಕ್ಕೆ ಪ್ರಯಾಣವನ್ನು ಕೈಗೊಳ್ಳಬಹುದು. ಇದು ಕೋನಾರ್ಕ ನಗರಕ್ಕೆ ಭೇಟಿ ನೀಡಲು ಯೋಗ್ಯವಾದ ಸಮಯವಾಗಿದೆ. ಈ ಸಮಯದಲ್ಲಿ ಚಳಿಗಾಲದ ತಾಪಮಾನವು ಆಹ್ಲಾದಕತೆಯಿಂದ ಕೂಡಿದ್ದು, ಸುಂದರ ದೃಶ್ಯಗಳನ್ನು ನೋಡಲು ಅನುಕೂಲವಾಗುತ್ತದೆ.

ಬೇಸಿಗೆಗಾಲ

ಕೋನಾರ್ಕವು ಉಷ್ಣವಲಯದ ಹವಾಗುಣವನ್ನು ಹೊಂದಿದೆ. ಇಲ್ಲಿ ಬೇಸಿಗೆಯ ತಿಂಗಳುಗಳು ಉಷ್ಣ ಮತ್ತು ಆದ್ರ್ರತೆಯಿಂದ ಕೂಡಿರುತ್ತದೆ. ಆಗ ಇಲ್ಲಿನ ಗರಿಷ್ಟ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ನಷ್ಟು ಇರುತ್ತದೆ. ಈ ಸಮಯದಲ್ಲಿ ಸುಡುವ ಸೂರ್ಯನ ಪ್ರಖಲ ಬಿಸಿಲು ಇರುವ ಕಾರಣದಿಂದ ಪ್ರವಾಸಿಗರು ಬೇಸಿಗೆ ಕಾಲದಲ್ಲಿ ಕೋನಾರ್ಕಗೆ ಭೇಟಿ ನೀಡುವುದು ಅಷ್ಟೊಂದು ಯೋಗ್ಯವಲ್ಲ. ಕೋನಾರ್ಕನಲ್ಲಿ ಬೇಸಿಗೆಗಾಲವು ಮಾರ್ಚ ತಿಂಗಳಿನಿಂದ ಜೂನ ತಿಂಗಳಿನವರೆಗೂ ಇರುತ್ತದೆ.

ಮಳೆಗಾಲ

ಮಳೆಗಾಲವು ಕೋನಾರ್ಕನಲ್ಲಿ ಜುಲೈ ತಿಂಗಳಲ್ಲಿ ಆರಂಭಗೊಂಡು ಸಪ್ಟಂಬರ ತಿಂಗಳ ಅಂತ್ಯದವರೆಗೂ ಇಲ್ಲವೇ ಅಕ್ಟೋಬರ ತಿಂಗಳ ಆರಂಭದವರೆಗೂ ಮುಂದುವರೆಯುತ್ತದೆ. ಇಲ್ಲಿ ಜೂನನಲ್ಲಿ ನೈರುತ್ಯ ಮಾರುತಗಳ ಕಾರಣದಿಂದಾಗಿ ಮಳೆ ಉಂಟಾಗುತ್ತದೆ. ಇದು ಬಿಸಿಲಿನ ಬೇಗೆಯಿಂದ ಬೆಂದವರಿಗೆ ನೆಮ್ಮದಿಯನ್ನು ತರುತ್ತದೆ. ಆದರೆ ಜುಲೈ ಮತ್ತು ಅಗಸ್ಟ ತಿಂಗಳಿನಲ್ಲಿ ಇಲ್ಲಿ ಗರಿಷ್ಟ ಪ್ರಮಾಣದ ಮಳೆ ಆಗುತ್ತದೆ. ಮಳೆಗಾಲದ ಅವಧಿಯಲ್ಲಿ ಇಲ್ಲಿನ ತಾಪಮಾನವು ಸುಮಾರು 25 ಡಿಗ್ರಿ ಸೆಲ್ಸಿಯಸ ನಷ್ಟು ಇಳಿಕೆ ಆಗುತ್ತದೆ.

ಚಳಿಗಾಲ

ಕೋನಾರ್ಕನಲ್ಲಿ ಚಳಿಗಾಲವು ಆಹ್ಲಾದಕರವಾಗಿರುತ್ತದೆ. ಇಲ್ಲಿ ಚಳಿಗಾಲವು ಅಕ್ಟೋಬರನಿಂದ ಆರಂಭಗೊಂಡು ಫೆಬ್ರುವರಿ ಕೊನೆಯವರೆಗೂ ಮುಂದುವರೆಯುತ್ತದೆ. ಡಿಸಂಬರ ಮತ್ತು ಜನೇವರಿ ತಿಂಗಳುಗಳಲ್ಲಿ ಇಲ್ಲಿನ ತಾಪಮಾನವು ಕನಿಷ್ಟ 12 ಡಿಗ್ರಿ ಸೆಲ್ಸಿಯಸನಷ್ಟು ಇಳಿಕೆ ಆಗುತ್ತದೆ. ಚಳಿಗಾಲದ ತಾಪಮಾನವು ಆಹ್ಲಾದಕತೆಯಿಂದ ಕೂಡಿದ್ದು, ಸುಂದರ ದೃಶ್ಯಗಳನ್ನು ನೋಡಲು ಅನುಕೂಲವಾಗುತ್ತದೆ. ಈ ಸಮಯದಲ್ಲಿ ಕೋನಾರ್ಕಗೆ ಭೇಟಿ ನೀಡುವ ಪ್ರವಾಸಿಗರು ತಮ್ಮೊಂದಿಗೆ ವೂಲನ ಬಟ್ಟೆಗಳನ್ನು ಕೊಂಡೊಯ್ಯಲು ಮರೆಯಬಾರದು.