ಮಸ್ತಿಕಟ್ಟೆಯು ಕಾಡಿನ ದೇವತೆಗಳಿಗೆ ಸಮರ್ಪಿಸಲಾದ ದೇವಾಲಯವಾಗಿದ್ದು, ಪ್ರವಾಸಿಗರು ಸಮಯಾವಕಾಶ ದೊರೆತರೆ ಇಲ್ಲಿಗೆ ಭೇಟಿಕೊಡಬಹುದು. ಇಲ್ಲಿನ ದೇವರುಗಳಿಗೆ ಯಾವುದೇ ಛಾವಣಿ ಮತ್ತು ಗುಡಿಯಿಲ್ಲ. ಅದರು ಇಲ್ಲಿನ ಸ್ಥಳೀಯ ಅರ್ಚಕರಿಂದ ಇಲ್ಲಿನ ದೇವರುಗಳಿಗೆ ನಿತ್ಯ ಪೂಜೆ ನೆರವೇರಲ್ಪಡುತ್ತದೆ.ಇಲ್ಲಿನ ನಂಬಿಕೆಯ ಪ್ರಕಾರ ಇಲ್ಲಿನ ದೇವರುಗಳಿಗೆ ಮಕ್ಕಳಿಗೆ ಬರುವ ವ್ಯಾಧಿಗಳನ್ನು ಗುಣಪಡಿಸುವಂತಹ ವಿಶೇಷ ಶಕ್ತಿಯಿದೆಯಂತೆ. ಇಲ್ಲಿನ ದೇವಾಲಯಕ್ಕೆ ಭೇಟಿಕೊಡುವ ಭಕ್ತರು ದೇವರಿಗೆ ತೊಟ್ಟಿಲು, ಅಡಿಕೆ ಮರದ ಹೂಗಳು, ಬಳೆಗಳು ಮತ್ತು ಘಂಟೆಗಳ ಕಾಣಿಕೆಗಳನ್ನು ಸಮರ್ಪಿಸುತ್ತಾರೆ. ಪ್ರವಾಸಿಗರು ಈ ದೇವಾಲಯದ ಸುತ್ತಮುತ್ತಲ ಕಣ್ಮನ ಸೆಳೆಯುವ ಪ್ರಾಕೃತಿಕ ಸೊಬಗನ್ನು ಕಣ್ತುಂಬಿಕೊಳ್ಳಬಹುದು.


Click it and Unblock the Notifications