ನಾಗಾಲ್ಯಾಂಡ್ ನ ರಾಜಧಾನಿ ನಗರ ಕೊಹಿಮಾದ ಸುತ್ತಲೂ ಇರುವ ನಗರೀಕರಣವೇ ಗ್ರೇಟರ್ ಕೊಹಿಮಾ. ಈ ನಗರೀಕರಣದಲ್ಲಿ ಕೊಹಿಮಾದ ಗ್ರಾಮ, ಜಖಮಾ ಮತ್ತು ಜೊತ್ಸೊಮಾವಿದೆ. ಗ್ರೇಟರ್ ಕೊಹಿಮಾದಲ್ಲಿ ಪ್ರವಾಸಿಗರಿಗೆ ಹಲವಾರು ಆಕರ್ಷಣೀಯ ತಾಣಗಳಿವೆ. ಇದರಲ್ಲಿ ನಾಗಾಲ್ಯಾಂಡ್ ನ ರಾಜ್ಯ ಮ್ಯೂಸಿಯಂ ಕೂಡ ಒಂದಾಗಿದ್ದು, ಇತಿಹಾಸದ ವಿವಿಧ ನಾಗಾ ಬುಡಕಟ್ಟು ಜನಾಂಗದ ಸಂಸ್ಕೃತಿ ಬಗ್ಗೆ ನಸುನೋಟವನ್ನು ಬೀರುವಂತಹ ಖಜಾನೆಯೇ ಇಲ್ಲಿದೆ. ಮ್ಯೂಸಿಯಂನ್ನು ಹೊರತುಪಡಿಸಿ ಗ್ರೇಟರ್ ಕೊಹಿಮಾದಲ್ಲಿ ಭೇಟಿ ನೀಡಬೇಕಾಗಿರುವ ಪ್ರಮುಖ ತಾಣವೆಂದರೆ ಝೂಲಾಜಿಕಲ್ ಪಾರ್ಕ್.
ಇಲ್ಲಿ ಅತ್ಯಂತ ಅಪರೂಪದ ಸಸ್ಯ ಹಾಗೂ ಪ್ರಾಣಿಸಂಕುಲವನ್ನು ನೋಡಬಹುದಾಗಿದೆ. ಖೊನೊಮಾ, ಇಂಟನಗ್ಕಿ ಅಭಯಾರಣ್ಯ, ಎರಡನೇ ವಿಶ್ವಯುದ್ಧ ಸ್ಮಾರಕ ಮತ್ತು ಕ್ಯಾಥೋಲಿಕ್ ಕೆಥೆಡ್ರಲ್ ವಿಶ್ವದ ಈ ಭಾಗಕ್ಕೆ ಭೇಟಿ ನೀಡುವ ಪ್ರವಾಸಿಗಳು ನೋಡಲೇಬೇಕಾದ ಪ್ರವಾಸಿ ತಾಣಗಳು. ವಿಶ್ವವಿಖ್ಯಾತ ನಾಗಾ ಶಾಲುಗಳ ಸಹಿತ ನಾಗ ಕಲೆಗಳು ಮತ್ತು ಹಸ್ತಕೃತಿಗಳ ಮಾರಾಟ ಕೇಂದ್ರವಾಗಿರುವ ರಾಜ್ಯ ವಾಣಿಜ್ಯ ಕೇಂದ್ರಕ್ಕೆ ಭೇಟಿ ನೀಡಬಹುದು. ಕೆಲವು ರುಚಿಕರವಾದ ಖಾದ್ಯಗಳನ್ನು ಸವಿಯಲು ಮರೆಯದಿರಿ.


Click it and Unblock the Notifications