ಉಪಾಯುಕ್ತರ ಬಂಗಲೆ ಕೊಹಿಮಾಗೆ ಭೇಟಿ ನೀಡುವವರಿಗೆ ಅತ್ಯಂತ ಪ್ರಮುಖ ಪ್ರವಾಸಿ ತಾಣವಾಗಿದೆ. ವಸಹಾತುಶಾಹಿಯಿಂದ ಹಿಡಿದು ನಾಗಾಲ್ಯಾಂಡ್ ರಾಜ್ಯ ಸ್ಥಾನವನ್ನು ಪಡೆಯುವ ತನಕ ಇದು ನಾಗಾ ಹಿಲ್ಸ್ ಜಿಲ್ಲೆಯ ಆಡಳಿತ ಕಚೇರಿಯಾಗಿದೆ. ಈ ಕಟ್ಟಡವು ಬ್ರಿಟಿಷ್ ಮತ್ತು ನಾಗಾ ವಾಸ್ತುಶಿಲ್ಪದ ಸಮ್ಮಿಲನದ ಸೌಂದರ್ಯವನ್ನು ತೋರಿಸುತ್ತದೆ. ನಗರದ ಹೃದಯಭಾಗದಲ್ಲಿರುವ ಇದು ಕೊಹಿಮಾ ಯುದ್ಧ ಸ್ಮಾರಕದ ಸಮೀಪದಲ್ಲೇ ಇದ್ದು, ಸುಂದರವಾಗಿರುವ ಗಾರ್ಡನ್ ಗಳು ಬಂಗಲೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಬಂಗಲೆ ಎರಡನೇ ವಿಶ್ವಯುದ್ಧದ ರಕ್ತಸಿಕ್ತ ಕದನಕ್ಕೆ ಸಾಕ್ಷಿಯಾಗಿದೆ ಮತ್ತು ಇದನ್ನು ಯುದ್ಧದ ವೇಳೆ ನೆಲಕ್ಕುರುಳಿಸಲಾಗಿತ್ತು. ಆದರೆ ಯುದ್ಧದ ಬಳಿಕ ಇದನ್ನು ಪುನರ್ ನಿರ್ಮಿಸಲಾಯಿತು. ಬಂಗಲೆಯ ಟೆನಿಸ್ ಕೋರ್ಟ್ ನಲ್ಲಿ ನಡೆದ ಟೆನಿಸ್ ಕೋರ್ಟ್ ಕದನ ಆಗ್ನೇಯ ಏಶ್ಯಾದಲ್ಲಿ ಯುದ್ಧದ ಪ್ರಮುಖ ತಿರುವಾಗಿತ್ತು. ಬಂಗಲೆಯ ಟೆನಿಸ್ ಕೋರ್ಟ್ ನಲ್ಲಿ ನಡೆದ ಯುದ್ಧದಲ್ಲಿ ಮೈತ್ರಿಪಡೆ ಮತ್ತು ಜಪಾನ್ ನ ಸುಮಾರು 9500 ಮಂದಿ ಸೈನಿಕರು ಜೀವ ತೆತ್ತಿದ್ದರು.


Click it and Unblock the Notifications