ಅಮಲ ವನ್ಯಧಾಮ ಸುಮಾರು 15 ಎಕರೆ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ತೀರಾ ಅಪರೂಪದ ಪ್ರಾಣಿಪಕ್ಷಿ ಪ್ರಭೇದಗಳಿಗೆ ಇದು ಹೆಸರುವಾಸಿ. ಖೊಡಾಲಾದಲ್ಲಿರುವ ಈ ವನ್ಯಧಾಮವು ವಿವಿಧ ರೀತಿಯ ಪ್ರಾಣಿಗಳು, ಹಕ್ಕಿಗಳು ಮತ್ತು ಸಸ್ಯಗಳಿಗೆ ಹೆಸರುವಾಸಿ.
ಇಲ್ಲಿರುವ ಕೆಲವು ವಿಶಿಷ್ಟ ಪ್ರಾಣಿಗಳೆಂದರೆ ಬಿಳಿ ಹಂದಿ, ಜಿಂಕೆ, ಕಾಡುಕೋಣ, ಕತ್ತೆಕಿರುಬ ಮತ್ತು ಗುಳ್ಳೆನರಿ ಹಾಗೂ ಮಂಗಗಳು. ಓರಿಯಲ್ಸ್, ರಾಬಿನ್ ಮತ್ತು ಮಾಗ್‌ಪೈಪ್ಸ್‌ನಂಥ ಅಪರೂಪದ ಹಕ್ಕಿಗಳೂ ಇಲ್ಲಿವೆ. ಹಾಗೆ ಇನ್ನೂ ಹಲವು ಪ್ರಭೇದಗಳ ವಲಸೆ ಹಕ್ಕಿಗಳನ್ನು ಪ್ರವಾಸಿಗರು ನೋಡಬಹುದು.


Click it and Unblock the Notifications