ಶಾಹಿ, ಹಲ್ದ್ವಾನಿ ಮತ್ತು ಕಥ್ಗೊಡಮ್ ಪ್ರದೇಶಗಳ ಮೂಲಕ ಹರಿಯುವ ಗೌಲ ನದಿಯು ಸಾತ್ತಾಲ್ ಸರೋವರದಲ್ಲಿ ಹುಟ್ಟಿ, 500 ಕಿಲೋಮೀಟರ್ ಉದ್ದ ಹರಿದು ಉತ್ತರ ಪ್ರದೇಶದ ರಾಮ್ ಗಂಗಾ ನದಿಯನ್ನು ಸೇರುತ್ತದೆ. ನಂತರದಲ್ಲಿ ಪವಿತ್ರ ಗಂಗಾ ನದಿಯಲ್ಲಿ ಲೀನವಾಗುತ್ತದೆ. ಮಣ್ಣಿನ ಸವೆತ ಮತ್ತು ಅರಣ್ಯನಾಶದಿಂದಾಗಿ, ಒಟ್ಟಾರೆ ಮಳೆಯ ಪ್ರಮಾಣ ಕಡಿಮೆಯಾಗಿದ್ದು ನದಿಯಲ್ಲಿ ನೀರಿನ ಪ್ರಮಾಣವೂ ಕಡಿಮೆಯಾಗಿದೆ. ಗೌಲ ಆಣೆಕಟ್ಟು ಎಂದು ಕರೆಯಲ್ಪಡುವ ಒಂದು ಆಣೆಕಟ್ಟನ್ನು ಈ ನದಿಗೆ ಕಟ್ಟಲಾಗಿದ್ದು ಇದು ಒಂದು ಆದರ್ಶ ವಿಹಾರಿ ತಾಣವೂ ಆಗಿದೆ.


Click it and Unblock the Notifications