ಕಸೌಲಿಯಿಂದ ಸುಮಾರು 3 ಕಿ.ಮೀ.ದೂರದಲ್ಲಿರುವ ಗ್ರ್ಯಾನರ್ ಹಿಲ್ ಮೇಲ್ಭಾಗದಲ್ಲಿರುವ ಬಾಬಾ ಬಾಲಕ್ ನಾಥ್ ದೇವಸ್ಥಾನವು ಗುಹೆಯ ಒಳಭಾಗದಲ್ಲಿರುವ ದೇವಸ್ಥಾನವಾಗಿದೆ. ಕಸೌಲಿ ನಗರದಲ್ಲಿರುವ ಅತ್ಯಂತ ಜನಪ್ರಿಯ ಧಾರ್ಮಿಕ ಕೇಂದ್ರ ಇದಾಗಿದೆ. ಇದು ಬಾಬಾ ಬಾಲಕ್ ನಾಥರ ದೇವಸ್ಥಾನವಾಗಿದ್ದು ಈತನು ಶಿವನ ಪರಮ ಪೂಜ್ಯ ಭಕ್ತನಾಗಿದ್ದ ಎನ್ನಲಾಗಿದೆ.
ಮಕ್ಕಳಿಲ್ಲದ ದಂಪತಿಗಳು ಈ ದೇವಸ್ಥಾನದಲ್ಲಿ ಹರಕೆ ಹೊತ್ತುಕೊಳ್ಳುವುದರಿಂದ ಸಂತಾನಾಭಿವೃದ್ಧಿ ಆಗುತ್ತದೆ ಎಂಬ ನಂಬಿಕೆ ಇದೆ. ವರವಾಗಿ ಕೊಟ್ಟಂಥ ಮಗುವಿನೊಂದಿಗೆ ಶಿವನ ಅನೇಕ ವಿಗ್ರಹಗಳು ಇಲ್ಲಿವೆ, ಇದೇ ಈ ದೇವಸ್ಥಾನದ ವಿಶೇಷವಾಗಿದೆ. ಗುಹೆಯ ಒಳಗೆ ಮಹಿಳೆಯರಿಗೆ ಹೋಗಲು ಪ್ರವೇಶವಿಲ್ಲ. ಹಿಂದೂಗಳ ಹಬ್ಬವಾದ ನವರಾತ್ರಿಯನ್ನು ಇಲ್ಲಿ ಅದ್ದೂರಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುವುದು.
ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಸಮೀಪದಲ್ಲೇ ಇರುವ ಶಹ ತಲೈ ಪ್ರದೇಶವನ್ನು ರೋಪ್ ವೇ ಮೂಲಕ ಹೋಗಿ ಭೇಟಿ ನೀಡಬಹುದು.


Click it and Unblock the Notifications