ಕರೂರಿನ ವಾಯವ್ಯ ಭಾಗದಲ್ಲಿರುವ ಪುಗಳೂರ್ ನಲ್ಲಿ ಪ್ರಸಿದ್ಧ ಪುಗಳಿಮಲೈ ಶ್ರೀ ಆರುಪಡೈ ಮುರುಗನ್ ದೇವಾಲಯವನ್ನು ಕಾಣಬಹುದು. ಈ ಪುರಾತನ ದೇವಾಲಯವು ಕಾವೇರಿ ನದಿ ತಟದ ವೇಲಾಯುತನಪಾಳಯಂನ ಗುಡ್ಡದ ತುದಿಯೊಂದರಲ್ಲಿ ನೆಲೆಸಿದೆ. ಚೇರರು ಆಳುತ್ತಿದ್ದ ಕಾಲದಲ್ಲಿ ನಿರ್ಮಿತವಾದ ಈ ದೇವಾಲಯವು ಸುಂದರವಾದ ಕೆತ್ತನೆಗಳಿಂದ ಅಲಂಕರಿಸಲ್ಪಟ್ಟಿದೆ. ಸುಬ್ರಹ್ಮಣ್ಯ ಅಥವಾ ಮುರುಗನ್ ಈ ದೇವಾಲಯದ ಮುಖ್ಯ ದೇವರು. ತೈಪೂಸಂ ಇಲ್ಲಿ ಆಚರಿಸಲಾಗುವ ಪ್ರಮುಖ ಉತ್ಸವ. ಇದನ್ನು ಪ್ರತಿ ವರ್ಷ ಫೆಬ್ರುವರಿಯ ಮೊದಲನೇಯ ವಾರದಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಭಕ್ತಾದಿಗಳು ದೇವಾಲಯದ ಉತ್ಸವ ಮೂರ್ತಿಯನ್ನು ರಥ(ತೇರು)ದಲ್ಲಿ ಕುಳ್ಳಿರಿಸಿ ರಾತ್ರಿಯೆಲ್ಲ ಮೆರವಣಿಗೆ ಮಾಡುತ್ತಾರೆ.


Click it and Unblock the Notifications