10ನೇ ಶತಮಾನಗಳಲ್ಲಿನ ಜೈನ ದೇವಾಲಯಗಳಿಗೆಂದೇ ಪ್ರಸಿದ್ಧಿ ಹೊಂದಿರುವ ಮೂಡಬಿದಿರೆ ಜೈನ ಕಾಶಿ ಎಂದೇ ಪ್ರಸಿದ್ಧಿಯಾಗಿದೆ. ಇಲ್ಲಿರುವ ಹೊಳಪುಳ್ಳ ಗ್ರಾನೈಟ್ ಬಳಸಿ ನಿರ್ಮಿಸಿರುವ ಚಂದ್ರನಾಥ ದೇವಾಲಯವು ಅತ್ಯಾಕರ್ಷಕವಾಗಿದೆ. ವಿಶಿಷ್ಟ ಕೆತ್ತನೆಗಳಿಂದ ಕಂಗೊಳಿಸುರವ 1000 ಕಂಬಗಳು ಈ ದೇವಾಲಯದಲ್ಲಿರುವುದು ವಿಶೇಷ.7ನೇ ಶತಮಾನದ ಕಾಂತಾವಾರ ದೇವಸ್ಥಾನ, 9ನೇ ಶತಮಾನದ ಗೌರಿ ದೇವಸ್ಥಾನ ಇವು ಕೂಡ ಹಿಂದೂಗಳ ತೀರ್ಥಸ್ಥಳಗಳೆಂದೇ ಪ್ರಸಿದ್ಧಿಯಾಗಿವೆ. ಐತಿಹಾಸಿಕವಾಗಿ ಪ್ರಸಿದ್ಧವಾಗಿರುವ ಧವಲ ಪಠ್ಯಗೃಹವೆಂದೇ ಹೆಸರಾಗಿರುವ ಗುರು ಬಸದಿ ಮೂಡಬಿದಿರೆಯಲ್ಲಿರುವ ಮತ್ತೊಂದು ಪ್ರೇಕ್ಷಣೀಯ ಸ್ಥಳ. ಕೊಣಜೆ ಕಲ್ಲು ಎಂಬ ಜಾತಿಯ ಗ್ರಾನೈಟ್ ನಲ್ಲಿ ನಿರ್ಮಿಸಿರುವ ದಿ ಚಾರುಕೀರ್ತಿ ಸ್ವಾಮೀಜಿ ಮಠವು ಪ್ರವಾಸಿಗರಿಗೆ ಮೆಚ್ಚಿನ ತಾಣವಾಗಿದೆ.ಅಮ್ಮನವರ ಬಸದಿ, ತ್ರಿಭುವನದ ತಿಲಕ ಚೂಡಾಮಣಿ ಬಸದಿ, ಲೆಪ್ಪದ ಬಸದಿ ಮೂಡಬಿದಿರೆಯನ್ನು ಪ್ರಖ್ಯಾತ ತೀರ್ಥಯಾತ್ರಾ ಸ್ಥಳವನ್ನಾಗಿಸಿವೆ.


Click it and Unblock the Notifications