ಕೊಂಡನ ಗುಹೆಗಳು ಕರ್ಜಾತ್ ನಲ್ಲಿ ಕಂಡುಬರುತ್ತವೆ. ಇವು ಹಿಂದಿನ ಕಾಲದಲ್ಲಿ ಬೌದ್ಧರು ಅನುಸರಿಸುತ್ತಿದ್ದ ಪದ್ಧತಿಯ ಬಗ್ಗೆ ಇಣುಕು ನೋಟವನ್ನು ನೀಡುತ್ತವೆ. ಪುರಾತನ ಕಾಲದ ಇಲ್ಲಿನ ಕಲ್ಲಿನ ಗುಹೆಗಳು ಅನೇಕ ಪ್ರತಿಮೆಗಳು, ಸ್ತೂಪಗಳು, ವಿಹಾರ ಹಾಗೂ ಚೈತ್ಯಗಳನ್ನು ಒಳಗೊಂಡಿದೆ. ಸುಮಾರು 2,000 ವರ್ಷಗಳ ಹಿಂದೆ ನಿರ್ಮಿಸಲಾದ ಈ ಗುಹೆಗಳು ಪ್ರವಾಸಿಗರನ್ನು 2 ನೇ ಶತಮಾನಕ್ಕೆ ಕೊಂಡೊಯ್ಯುತ್ತದೆ.
ಶಿಲ್ಪಗಳು ಹಾಗೂ ಸ್ತೂಪಗಳು ಬೌದ್ಧರ ಕಾಲದಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಬೌದ್ಧ ವಾಸ್ತು ಶಿಲ್ಪಗಳನ್ನು ಪ್ರತಿನಿಧಿಸುತ್ತವೆ. ಗುಹೆಗಳ ಒಳಭಾಗದಲ್ಲಿ ನಾನಾ ವಿಧದ ನೃತ್ಯ ಭಂಗಿಯನ್ನು ಬಿಂಬಿಸುವ ಪುರುಷ ಹಾಗೂ ಮಹಿಳೆಯರ ಕೆತ್ತನೆಗಳನ್ನು ನೋಡಬಹುದು. ದುರದೃಷ್ಟವಶಾತ್ ಭೂಕಂಪ ಮತ್ತಿತರ ಭೂಮಿಯ ವೈಪರಿತ್ಯದಿಂದಾಗಿ ಇಲ್ಲಿನ ಮುಂಭಾಗ, ಮಹಡಿಗಳು, ಹಾಗೂ ಅನೇಕ ಸ್ತೂಪಗಳು ನಾಶಗೊಂಡಿವೆ. ಪ್ರತಿವರ್ಷ, ಮಧ್ಯಕಾಲೀನದ ಈ ಗುಹೆಗಳನ್ನು ವೀಕ್ಷಿಸಲು ಹಲವಾರು ಬೌದ್ಧ ಧರ್ಮದ ಭಕ್ತಾದಿಗಳು ಆಗಮಿಸುತ್ತಾರೆ. ಈ ಪುಣ್ಯಕ್ಷೇತ್ರದ ಪಾವಿತ್ರ್ಯತೆಯನ್ನು ಉಳಿಸುವ ಸಲುವಾಗಿ ಈ ಸ್ಥಳದ ಸುತ್ತ ಮುತ್ತ ಧೂಮಪಾನ ಹಾಗೂ ಮಧ್ಯಪಾನಗಳನ್ನು ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದೆ.


Click it and Unblock the Notifications