ಜಮ್ಮ- ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ಉತ್ತರ ಭಾಗದಲ್ಲಿರುವ ಅತಿ ಎತ್ತರದ ಸ್ಥಳ ಜನ್ಸಕರ್. ವರ್ಷದ ಎಟು ತಿಂಗಳ ಕಾಲ ಇಲ್ಲಿ ವಿಪರೀತ ಹಿಮಪಾತ ಆಗುತ್ತಿರುತ್ತದೆ. ಇಡೀ ಪ್ರದೇಶವೇ ಹಿಮಾವೃತವಾಗಿದ್ದು, ಘನೀಭವಿಸಿರುತ್ತದೆ. ವಿಶ್ವದ ಇತರೆ ಭಾಗದ ಸಂಪರ್ಕವನ್ನೂ ಕಡಿದುಕೊಳ್ಳುತ್ತದೆ ಕೂಡ. ಇಲ್ಲಿ ಎರಡು ಕೆರೆಗಳಿದ್ದು ಸಮುದ್ರ ಮಟ್ಟದಿಂದ 4401 ಹಾಗೂ 4450 ಮೀಟರ್ ಎತ್ತರದಲ್ಲಿವೆ. ಇಲ್ಲಿ ಸಾಕಷ್ಟು ಆಶ್ರಮಗಳಿದ್ದು, ಎಲ್ಲವೂ ಟಿಬೇಟಿಯನ್ ಶೈಲಿಯಾದ ಜೊಂಗಕುಲ್, ಸ್ಟೋಂಗ್‌ಡೆ, ಕರ್ಶ ವಾಸ್ತುಶಿಲ್ಪವನ್ನು ಪ್ರತಿನಿಧಿಸುತ್ತವೆ. ಸಾಕಷ್ಟು ಕ್ಯಾಂಪಿಂಗ್ ತಾಣಗಳು ಇಲ್ಲಿವೆ. ಅತಿ ಎತ್ತರದ ತಾಣವಾಗಿರುವುದರಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತದೆ.
ಡ್ರ್ಯಾಂಗ್ ಡ್ರಂಗ್ ಹಿಮಾಚ್ಛಾದಿತ ಪ್ರದೇಶ ಇಲ್ಲಿನ ಒಂದು ಜನಪ್ರಿಯ ತಾಣವಾಗಿದೆ. ಜನ್ಸಕರ್ ತೆರಳುವ ಮಾರ್ಗದಲ್ಲಿ ಇದು ಕಾಣಸಿಗುತ್ತದೆ. ಇದಿರುವುದು ಸುರು ಕಣಿವೆ ಭಾಗದಲ್ಲಿ. ಕಾರ್ಗಿಲ್ ಹಾಗೂ ಹಿಮಾಲಯ ಪರ್ವತಗಳ ವಿಹಂಗಮ ನೋಟ ಸವಿಯುವ ಅವಕಾಶ ಇಲ್ಲಿ ತೆರಳುವಾಗ ಸಿಗುತ್ತದೆ. ಇಲ್ಲಿನ ಇನ್ನಿತರೆ ಖಾಯಂ ಆಕರ್ಷಣೆಯ ಕೇಂದ್ರಗಳು ಎಂದರೆ ಕೃಶಾ ಆಶ್ರಮ, ಪುಗ್ತಲ್ ಆಶ್ರಮ ಹಾಗೂ ಸ್ಟರಿಮೊ ಆಶ್ರಮಗಳಾಗಿವೆ.


Click it and Unblock the Notifications