ರಂಗದಂ ಆಶ್ರಮ ಅಥವಾ ಗೊಂಪಾವು ಸಮುದ್ರ ಮಟ್ಟದಿಂದ 3657 ಮೀಟರ್ ಎತ್ತರದಲ್ಲಿದೆ. ಇದಿರುವುದು ರಂಗದಂ ಹಳ್ಳಿಯಲ್ಲಿ. ಜಿಲ್ಲೆಯ ಅತ್ಯುತ್ತಮ ಗುರುತಾದ ಕೇಂದ್ರ ಎನಿಸಿರುವ ಈ ಆಶ್ರಮವನ್ನು 8ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಟಿಬೇಟಿಯನ್ ಕಲಾ ವಸ್ತುಗಳನ್ನು ಒಳಗೊಂಡ ಆಕರ್ಷಕ ಮ್ಯೂಸಿಯಂ ಇಲ್ಲಿದೆ. ಅಲ್ಲದೇ ಕೆಲ ಧಾರ್ಮಿಕ ಕಲಾ ವಸ್ತುಗಳೂ ಇಲ್ಲಿವೆ. ಆಶ್ರಮದಲ್ಲಿ 40 ಕ್ಕೂ ಹೆಚ್ಚು ಮೋಂಕ್‌ಗಳು ವಾಸವಾಗಿದ್ದಾರೆ.


Click it and Unblock the Notifications