ನಾನಾರಾವ್ ಪಾರ್ಕ್ ಅನ್ನು ಕಂಪನಿ ಬಾಗ್ ಎಂದೂ ಕರೆಯುತ್ತಾರೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಇದನ್ನು ಮೆಮೋರಿಯಲ್ ವೆಲ್ ಎಂದು ಸಹ ಕರೆಯುತ್ತಿದ್ದರು. ಏಕೆಂದರೆ, ಭಾರತೀಯ ಸ್ವಾತಂತ್ರ್ಯ ಚಳವಳಿಗಾರರು ನಾನಾ ಸಾಹೀಬ್ ನೇತೃತ್ವದಲ್ಲಿ 1857ರಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಸುಮಾರು 200 ಬ್ರಿಟಿಷ್ ಮಹಿಳೆಯರನ್ನು ಮತ್ತು ಮಕ್ಕಳನ್ನು ಕೊಂದುಹಾಕಿದ್ದರು. ಹತ್ಯಾಕಾಂಡಕ್ಕೆ ಸಾಕ್ಷಿಯಾದ ಈ ಕಟ್ಟಡವನ್ನು ಬೀಬಿಘರ್ ಎಂದು ಕರೆಯುತ್ತಾರೆ. ಮಡಿದ ದೇಹಗಳನ್ನು ಸಮೀಪದ ಬಾವಿಯೊಳಗೆ ಎಸೆಯಲಾಗಿತ್ತು. ಹೀಗೆ ಈ ಪಾರ್ಕ್ ಸ್ವಾತಂತ್ರ್ಯ ಚಳವಳಿಯ ದೃಷ್ಟಿಯಿಂದ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ.
ಬ್ರಿಟಿಷ್ ಸೈನಿಕರು ಇಲ್ಲಿಗೆ ಸಮೀಪದ ಸ್ಥಳವನ್ನು ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ ಜನರ ವಿಚಾರಣೆಗಾಗಿ ಬ್ರಿಟಿಷರು ಬಳಿಕೊಂಡಿದ್ದರು. ಸ್ಮಾರಕ ಕಟ್ಟಡವನ್ನು ಕಟ್ಟಲು ಕಾನ್ಪುರದ ಜನರಿಂದ 30 ಸಾವಿರ ಪೌಂಡ್ ಹಣವನ್ನು ಅವರು ಬಲವಂತವಾಗಿ ಕಿತ್ತುಕೊಂಡಿದ್ದರು.
ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಭಾರತ ಸರಕಾರ ಈ ಬ್ರಿಟಿಷ್ ಮೆಮೋರಿಯಲ್ ಅನ್ನು ಕೆಡವಿತು. ಈ ಪಾರ್ಕ್ ನಲ್ಲಿ 1857ರ ಕಾಲದ ಸ್ವಾತಂತ್ರ್ಯ ಹೋರಾಟಗಾರರಾದ ತಾತ್ಯಾಟೋಪಿ, ಅಜಿಜಾನ್ ಬಾಯಿ ಮತ್ತು ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಪ್ರತಿಮೆಗಳನ್ನು ನಿಲ್ಲಿಸಲಾಗಿದೆ.


Click it and Unblock the Notifications