Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾನ್ಪುರ್ » ಆಕರ್ಷಣೆಗಳು » ಶ್ರೀ ರಾಧಾಕೃಷ್ಣ ಮಂದಿರ

ಶ್ರೀ ರಾಧಾಕೃಷ್ಣ ಮಂದಿರ, ಕಾನ್ಪುರ್

3

ಸುಮಾರು ಅರ್ಧ ಶತಮಾನದ ಹಿಂದೆ ಜೆಕೆ ಟ್ರಸ್ಟಿನ ಸಿಂಘಾನಿಯಾ ಕುಟುಂಬವು ಈ ರಾಧಾಕೃಷ್ಣ ಮಂದಿರವನ್ನು ಕಟ್ಟಿಸಿತು. ಈ ಮಂದಿರ ಅನನ್ಯವಾದ ಪ್ರಾಚೀನ ಮತ್ತು ಆಧುನಿಕ ಶಿಲ್ಪಕಲೆಯನ್ನು ಪ್ರತಿಬಿಂಬಿಸುತ್ತದೆ. ಇದರ ಮಂಟಪವು ಎತ್ತರವಾದ ಮೇಲ್ಛಾವಣಿಯನ್ನು ಹೊಂದಿದೆ. ಇದರಿಂದಾಗಿ ಸ್ವಚ್ಛಂದವಾದ ಗಾಳಿ ಮತ್ತು ಬೆಳಕು ಆಡಲು ಅನುಕೂಲವಾಗಿದೆ.

ಈ ಮಂದಿರ 5 ಆರಾಧನಾಗೃಹ ಅಥವಾ ಗುಡಿಗಳನ್ನು ಹೊಂದಿದೆ. ಅದರಲ್ಲಿ ಮುಖ್ಯವಾದದ್ದು ರಾಧಾಕೃಷ್ಣ ಮಂದಿರ. ಇನ್ನುಳಿದ ನಾಲ್ಕು ಗುಡಿಗಳನ್ನು ಹನುಮಂತ, ಲಕ್ಷ್ಮೀನಾರಾಯಣ, ಅರ್ಧನಾರೀಶ್ವರ ಮತ್ತು ನರ್ಮದೇಶ್ವರ ದೇವರಿಗೆ ಸಮರ್ಪಿಸಲಾಗಿದೆ. ಸುಂದರವಾಗಿ ಕೆತ್ತಿದ ಮೂರ್ತಿಗಳನ್ನು ಅತಿ ಎತ್ತರವಾದ ಮೇಲ್ಛಾವಣಿ ಹೊಂದಿದೆ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದೆ.

ಶ್ರೀ ರಾಧಾಕೃಷ್ಣ ಮಂದಿರ ಬೃಹತ್ತಾದ ಉದ್ಯಾನವನ ಮತ್ತು ಕೊಳದ ಬಳಿ ಉಪಸ್ಥಿತವಿದೆ. ರಾತ್ರಿ ಹೊತ್ತು ದೀಪದಿಂದ ಪ್ರಕಾಶಮಾನವಾಗಿ ಬೆಳಗುವ ಮಂದಿರದ ಪ್ರತಿಬಿಂಬ ಕೊಳದ ನೀರಿನಲ್ಲಿ ಕಾಣುವುದು ಕಣ್ಮನ ತಣಿಸುತ್ತದೆ. ಈ ಮಂದಿರಕ್ಕೆ ಪ್ರವೇಶ ಉಚಿತ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue