ಹೆಸರೇ ಸೂಚಿಸುವ ಹಾಗೆ ಭೀತರ್ ಗಾಂವ್ ಮಂದಿರವು ತನ್ನ ನೆಲೆಯನ್ನು ಸೂಚಿಸುತ್ತದೆ. ಒಂದು ದಂತಕಥೆಯ ಪ್ರಕಾರ, ಈ ದೇವಸ್ಥಾನ ಹಿಂದಿನ ಕಾಲದಲ್ಲಿ ಪುಷ್ಪಪುರ ಅಥವಾ ಫೂಲ್ ಪುರ ಎಂದು ಕರೆಯಲಾಗುತ್ತಿದ್ದ ಹಳ್ಳಿಯ ಒಳಭಾಗದಲ್ಲಿ ಇತ್ತು. ಭೀತರ್‌ಗಾಂವ್ ಹಳ್ಳಿ 6ನೇ ಶತಮಾನದಲ್ಲಿ ಗುಪ್ತರ ಗತವೈಭವದ ಕಾಲದಲ್ಲಿ ಕಟ್ಟಿಸಲಾದ ಒಂದು ಗುಡಿಯನ್ನು ಹೊಂದಿದೆ. ಹೀಗಾಗಿ ಈ ಗುಡಿಗೆ ಭೀತರ್‌ಗಾಂವ್ ಮಂದಿರ ಎಂದೇ ಕರೆಯುತ್ತಾರೆ.
ಭೀತರ್ ಗಾಂವ್ ಮಂದಿರವನ್ನು ಅತ್ಯಂತ ಪುರಾತನ ಹಿಂದೂ ಪೂಜಾಸ್ಥಳ ಎಂದು ಪರಿಗಣಿಸಲಾಗಿದೆ. ಇದಕ್ಕೆ ಅತಿ ಎತ್ತರವಾದ ಗೋಪುರವಿದೆ. ನೆಲದಿಂದ 68.25 ಅಡಿ ಎತ್ತರವಿರುವ ಮಂದಿರದ ಕಟ್ಟಡವನ್ನು ಟೆರ್ರಾಕೋಟ ಮತ್ತು 18 ಇಂಚ್ ಉದ್ದ, 9 ಇಂಚ್ ಅಗಲ, 3 ಇಂಚ್ ಎತ್ತರದ ಇಟ್ಟಿಗೆಗಳಿಂದ ಕಟ್ಟಿಸಲಾಗಿದೆ. ಇದನ್ನು 36 ಬೈ 47 ಅಡಿ ಪ್ಲಾಟ್ ಫಾರ್ಮ್ ಮೇಲೆ ಕಟ್ಟಿಸಲಾಗಿದೆ. ದೇವಸ್ಥಾನದ ಗೋಡೆ 8 ಅಡಿ ದಪ್ಪವಿದೆ.
ಕಮಾನಿನಾಕಾರದ ಮೇಲ್ಛಾವಣಿಯನ್ನು ಮೊದಲ ಬಾರಿಗೆ ಭಾರತದಲ್ಲಿ ನಿರ್ಮಿಸಲಾಗಿದೆ. ಇಡೀ ಕಟ್ಟಡದ ವಿನ್ಯಾಸ ಅಂದಿನ ಕಾಲದ ವಿಶಿಷ್ಟಬಗೆಯ ವಿನ್ಯಾಸಕ್ಕೆ ಪುರಾವೆಯಂತಿದೆ. 15 ಬೈ 15 ಅಡಿ ಇರುವ ಗರ್ಭಗುಡಿಗೆ ಎರಡು ಮಹಡಿ ಇವೆ. ಸೀತಾದೇವಿ ಅಪರಹಣವಾದ ನಂತರರ ನರ ಮತ್ತು ನಾರಾಯಣ ಇದ್ದ ಸ್ಥಿತಿಯನ್ನು ಇಲ್ಲಿ ಬಿಂಬಿಸಲಾಗಿದೆ.


Click it and Unblock the Notifications