Search
  • Follow NativePlanet
Share
ಮುಖಪುಟ » ಸ್ಥಳಗಳು » ಕಣ್ಣೂರು » ಆಕರ್ಷಣೆಗಳು » ಹೋಲಿ ಟ್ರಿನಿಟಿ ಕ್ಯಾಥೆಡ್ರಲ್

ಹೋಲಿ ಟ್ರಿನಿಟಿ ಕ್ಯಾಥೆಡ್ರಲ್, ಕಣ್ಣೂರು

1

ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಕೇರಳಾ ರಾಜ್ಯದ ಪ್ರಖ್ಯಾತ ಚರ್ಚ್ ಗಳಲ್ಲಿ ಹೋಲಿ ಟ್ರಿನಿಟಿ ಚರ್ಚ್ ಕೂಡ ಒಂದು. ಉತ್ತರ ಮಲಬಾರ್ ಪ್ರಾಂತ್ಯದಲ್ಲಿ ಮಿಷನರಿ ಸೇವೆ ಆರಂಭಿಸಿದ ಕಾಲದಲ್ಲಿ ಈ ದೇವಾಲಯವನ್ನು ನಿರ್ಮಾಣ ಮಾಡಲಾಯಿತು ಎಂದು ಇತಿಹಾಸ ಹೇಳುತ್ತದೆ. ಸುಮಾರು 16ನೇ ಶತಮಾನದಲ್ಲಿ ನಾಲ್ಕು ಮಂದಿ ಫ್ರಾನ್ಸ್ ದೇಶದ ಮಿಷನರಿಗಳು ಕ್ರೈಸ್ತ ಮತ ಪ್ರಚಾರಕ್ಕಾಗಿ ಮಲಬಾರ್ ಪ್ರದೇಶಕ್ಕೆ ಬಂದ ದಿನಗಳಲ್ಲಿ ಈ ರೋಮನ್ ಕ್ಯಾಥೋಲಿಕ್ ಚರ್ಚ್ ಅನ್ನು ನಿರ್ಮಾಣ ಮಾಡಿದರು ಎಂದು ಹೇಳಲಾಗುತ್ತದೆ. ಅಂದಿನ ರಾಜ ಮಹಾರಾಜರ ಅನುಮತಿಯ ಮೇರೆಗೆ ಮಿಷನರಿಗಳು 1501ರಲ್ಲಿ ಈ ಚರ್ಚ್ ಅನ್ನು ನಿರ್ಮಿಸಿದರು. ಈಗಲೂ ಕೂಡ ಯಾವುದೇ ಬದಲಾವಣೆ ಇಲ್ಲದೆ ಕಟ್ಟಡ ಅದೇ ವಾಸ್ತಶಿಲ್ಪ ಹೊಂದಿದೆ.

ಕಣ್ಣೂರಿನಿಂದ ಕೆಲವೇ ಕಿ.ಮೀ. ದೂರದಲ್ಲಿರುವ ಬರ್ನಸರಿಯಲ್ಲಿ ಹೋಲಿ ಟ್ರಿನಿಟಿ ಚರ್ಚ್ ಇದೆ. ರಸ್ತೆ ಮಾರ್ಗವಾಗಿ ಇಲ್ಲಿಗೆ ಸುಲಭವಾಗಿ ತಲುಪಬಹುದು. ಬರ್ನಸರಿಯನ್ನು ಹಿಂದೆ ಕಣ್ಣೂರು ಕಂಟೋನ್ ಮೆಂಟ್ ಎಂಬುದಾಗಿ ಕರೆಯಲಾಗುತ್ತಿತ್ತು. ಬರ್ನಸರಿಯಲ್ಲಿ ಹೋಲಿ ಟ್ರಿನಿಟಿ ಚರ್ಚ್ ಅಲ್ಲದೆ ಇತರ ಆಕರ್ಷಣೆಗಳಾದ ಸೇಂಟ್ ಥಾಮಸ್ ಆರ್ಥೊಡಾಕ್ಸ್ ಚರ್ಚ್ ಹಾಗೂ ಸೇಂಟ್ ಏಂಜಲೋ ಫೋರ್ಟ್ ಪ್ರವಾಸಿಗರನ್ನು ಸೆಳೆಯುತ್ತವೆ. 2010 ರಲ್ಲಿ ಈ ಚರ್ಚ್ ಅನ್ನು ದುರಸ್ತಿ ಮಾಡಲಾಗಿತ್ತು. ರೋಮನ್-ಗಾಥಿಕ್ ಮಾದರಿಯ ವಾಸ್ತುಶಿಲ್ಪವನ್ನು ಹೊಂದಿರುವ ಈ ಐತಿಹಾಸಿಕ ಸ್ಮಾರಕ ಹೋಲಿ ಟ್ರಿನಿಟಿ ಚರ್ಚ್ ಎಲ್ಲರಿಗೂ ಪ್ರಿಯವಾದ್ದು.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue