ಕಣ್ಣೂರು ನಗರದಿಂದ 20 ಕಿ.ಮೀ.ದೂರದಲ್ಲಿರುವ ಚೆರುಕುನ್ನು ಒಂದು ಚಿಕ್ಕ ಪಟ್ಟಣ. ಧಾರ್ಮಿಕ ಸ್ಥಳಗಳಿಗೆ ಹೆಸರುವಾಸಿಯಾಗಿದೆ. ಚೆರುಕುನ್ನು ಎಂದರೆ ಮಲಯಾಳಂನಲ್ಲಿ ಚಿಕ್ಕ ಬೆಟ್ಟ ಎಂದು ಅರ್ಥ ಹಾಗೂ ಈ ಪಟ್ಟಣದ ಸುತ್ತಲು ಚಿಕ್ಕ ಬೆಟ್ಟಗಳೇ ಇರುವುದರಿಂದ ಈ ಪ್ರದೇಶಕ್ಕೆ ಚಿರುಕುನ್ನು ಎಂಬ ಹೆಸರು ಬಂದಿದೆ.
ಚಿರುಕುನ್ನುವಿನಲ್ಲಿ ಅನೇಕ ಚಿಕ್ಕಚಿಕ್ಕ ದ್ವೀಪಗಳಿದ್ದು ಇದನ್ನು ಸ್ಥಳೀಯರು 'ತುರುತ್ತು' ಎಂದು ಕರೆಯುತ್ತಾರೆ. ಇದು ಅತ್ಯಂತ ಸುಂದರ ಪ್ರಾಕೃತಿಕ ಸೊಬಗನ್ನು ಹೊಂದಿರುವ ಪ್ರದೇಶವಾಗಿದೆ. ಇಲ್ಲಿನ ಪುರಾತನ ರೋಮ್ ಕ್ಯಾಥೊಲಿಕ್ಕರ ಥಾವಮ್ ಚರ್ಚ್ ಪ್ರಮುಖ ಆಕರ್ಷಕ ಸ್ಥಳವಾಗಿದೆ. ಸೂಫಿ ಸಂತರ ಸಮಾಧಿ ಇರುವ ಓಲಿಯಂಕುರ ಜುಮ್ಮಾ ಮಸೀದಿ ಮತ್ತು ಸೇಂಟ್ ಮಾರ್ಟಿನ್ ಡಿ ಪೋರಸ್ ಆಸ್ಪತ್ರೆ ಅಥವಾ ಮಿಷನ್ ಆಸ್ಪತ್ರೆ ಪ್ರಮುಖ ಪ್ರವಾಸಿ ತಾಣಗಳಾಗಿವೆ.
ಚೆರುಕುನ್ನಿಲಮ್ಮ ದೇವಸ್ಥಾನ ಅಥವಾ ಅನ್ನಪೂರ್ಣೇಶ್ವರಿ ದೇವಸ್ಥಾನ ಕೇರಳಾ ಹಾಗೂ ಸುತ್ತಲಿನ ರಾಜ್ಯಗಳ ಭಕ್ತಾಧಿಗಳನ್ನು ಚೆರುಕುನ್ನಿಗೆ ಕರೆತರುತ್ತದೆ. ಭಾರತದಲ್ಲಿ ಆರಾಧಿಸುಲ್ಪಡುವ ಅನ್ನಪೂರ್ಣೇಶ್ವರಿಯ ಕೆಲವೇ ದೇವಾಲಯಗಳಲ್ಲಿ ಇದೂ ಒಂದು. ಅನ್ನ ನೀಡುವ ದೇವತೆ ಎಂದೇ ಅರ್ಥ ಕೊಡುವ ಅನ್ನಪೂರ್ಣೇಶ್ವರಿ ಸ್ವತಃ ಪಾರ್ವತಿ ದೇವಿಯೇ ಆಗಿದ್ದಾಳೆ. ಈ ದೇವಾಲಯವು ಅನ್ನದಾನಕ್ಕೆ ಹೆಸರುವಾಸಿಯಾಗಿದೆ.


Click it and Unblock the Notifications