Search
  • Follow NativePlanet
Share
ಮುಖಪುಟ » ಸ್ಥಳಗಳು » ಕಣ್ಣೂರು » ಆಕರ್ಷಣೆಗಳು » ಅರಾಲಾಮ್ ವನ್ಯಜೀವಿ ಸಂರಕ್ಷಣಾ ಕೇಂದ್ರ

ಅರಾಲಾಮ್ ವನ್ಯಜೀವಿ ಸಂರಕ್ಷಣಾ ಕೇಂದ್ರ, ಕಣ್ಣೂರು

4

ತಲಚೇರಿಯಿಂದ 35 ಕಿ.ಮೀ. ಹಾಗೂ ಕಣ್ಣೂರಿನಿಂದ 65 ಕಿ.ಮೀ.ದೂರದಲ್ಲಿ ಅರಾಲಾಮ್ ವೈಲ್ಡ್ ಲೈಫ್ ಸ್ಯಾಂಕ್ಚುರಿ ಇದೆ. ದಟ್ಟವಾದ ಅರಣ್ಯ ಪ್ರದೇಶವನ್ನು ಹೊಂದಿದ್ದು ಪಶ್ಚಮ ಘಟ್ಟಗಳಿಗೆ ಸೇರಿದ ಈ ಪ್ರದೇಶವನ್ನು  1984 ರಲ್ಲಿ ವನ್ಯಜೀವಿ ಸಂರಕ್ಷಣಾ ಕೇಂದ್ರವನ್ನಾಗಿ ಗುರುತಿಸಿ ಇದರ ಕೇಂದ್ರ ಸ್ಥಾನವನ್ನು 20 ಕಿ.ಮೀ.ದೂರದಲ್ಲಿರುವ ಇರಿಟ್ಟಿಯಲ್ಲಿ ಆರಂಭಿಸಲಾಗಿದ್ದು ಇಲ್ಲಿ ವಿಭಿನ್ನ ಜಾತಿಯ ವನ್ಯಪ್ರಾಣಿಗಳು ಹಾಗೂ ಪಕ್ಷಿಗಳಿವೆ. ಸಮುದ್ರ ಮಟ್ಟಕ್ಕಿಂತಲೂ 1145 ಮೀಟರ್ ಎತ್ತರದಲ್ಲಿರುವ ಕಟ್ಟಿ ಬೆಟ್ಟ ಇಲ್ಲಿನ ಅತ್ಯಂತ ಎತ್ತರವಾದ ಪ್ರದೇಶವಾಗಿದೆ.

ಈ ಸ್ಯಾಂಕ್ಚುರಿ ನಿಸರ್ಗ ಪ್ರೇಮಿಗಳು, ವನ್ಯ ಜೀವಿಗಳ ಸ್ನೇಹಿತರು ಹಾಗೂ ಪ್ರಕೃತಿ ಆರಾಧಕರಿಗೆ ಹೇಳಿ ಮಾಡಿಸಿದ ಸ್ಥಳ. ಇಲ್ಲಿ ಆನೆಗಳು, ಚುಕ್ಕಿ ಜಿಂಕೆಗಳು, ಕಾಡೆಮ್ಮೆ, ಕಡಬೆ, ಕಾಡು ಬೆಕ್ಕ, ಚಿರತೆ, ಹನುಮಾನ್ ಲಾಂಗೂರ್,ಬಾರ್ಕಿಂಗ್ ಡೀರ್, ನೀಗಿರಿ ಲಾಂಗೂರ್, ದೊಡ್ಡ ಜಾತಿಯ ಮಲಬಾರ್ ಅಳಿಲು ಮುಂತಾದ ಪ್ರಾಣಿಗಳು ಇಲ್ಲಿವೆ.

ಇಲ್ಲಿಗೆ ಭೇಟಿ ನೀಡಲು ಬಯಸುವವರು ನವೆಂಬರ್ ಹಾಗೂ ಜೂನ್ ತಿಂಗಳ ಮಧ್ಯದಲ್ಲಿ ಬರುವುದು ಉತ್ತಮ. ಮಳೆಗಾಲವು ಇಲ್ಲಿಗೆ ಭೇಟಿ ನೀಡಲು ಯೋಗ್ಯವಾದ ಕಾಲವಲ್ಲ. ಪಕ್ಷಿ ವೀಕ್ಷಕರಿಗೆ ಇದು ಉತ್ತಮ ವನ. ಇಲ್ಲಿ 215 ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳಿದ್ದು 172 ವಿಭಿನ್ನ ಜಾತಿಯ ಚಿಟ್ಟೆಗಳು ಕಂಡು ಬಂದಿವೆ.ಸಮಯ :ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆಪ್ರವೇಶ ಶುಲ್ಕ : ವಯಸ್ಸಿಗೆ ತಕ್ಕಂತೆ

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu