Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಧಮಲ್ » ಆಕರ್ಷಣೆಗಳು » ಲುಡು ಜಲಪಾತ

ಲುಡು ಜಲಪಾತ, ಕಂಧಮಲ್

1

ಲುಡು ಜಲಪಾತವು ಫುಲ್ಬನಿಯಿಂದ 165 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಕೊಟಗಡ್ ವನ್ಯಧಾಮದಲ್ಲಿ ನೆಲೆಗೊಂಡಿದೆ. ದಟ್ಟವಾದ ಹಸಿರು ಕಾನನದ ನಡುವೆ ಹಲವಾರು ಸಣ್ಣ ಜಲಪಾತಗಳ ಜೊತೆಗೆ, ಬೆಟ್ಟದ ಮೇಲಿನಿಂದ ಧುಮ್ಮಿಕ್ಕುವ ಈ ಭವ್ಯವಾದ ಜಲಪಾತವು ನೋಡುಗರಿಗೆ ಅದ್ಭುತವೆಂದರೆ ಏನು ಎಂಬುದರ ಪರಿಚಯ ಮಾಡಿಕೊಡುತ್ತದೆ. ಲುಡು ಜಲಪಾತಕ್ಕೆ ಸಾಗುವ ಹಾದಿಯು, ಉಬ್ಬು-ತಗ್ಗುಗಳಿಂದ ಕೂಡಿದ್ದು, ಪ್ರವಾಸಿಗರಿಗೆ ಆಯಾಸವನ್ನುಂಟು ಮಾಡುತ್ತದೆ. ಆದರೆ ಈ ಆಯಾಸವನ್ನು ಮರೆತು ಹೋಗುವಂತಹ ಅನುಭವವನ್ನು ಈ ಜಲಪಾತದ ಸೌಂದರ್ಯವು ನೀಡುತ್ತದೆ.

ಸಾಲ್ ಮರಗಳಿಂದ ಸುತ್ತುವರೆದಿರುವ ಈ ಜಲಪಾತವು ಕೊಟಗಡ್ ವನ್ಯಧಾಮದಲ್ಲಿ ನೆಲೆಗೊಂಡಿದೆ. ಇಲ್ಲಿನ ಸ್ಥಳೀಯ ಬುಡಕಟ್ಟು ಜನರು ತಮ್ಮ ಗುಡಿಸಲುಗಳಲ್ಲಿ ಈ ಸ್ಥಳದಲ್ಲಿ ವಾಸಿಸುತ್ತಿದ್ದಾರೆ. ನಗರದ ಸದ್ದು- ಗದ್ದಲಗಳಿಂದ ದೂರವಿರುವ ಈ ಜಲಪಾತವು ಮೈ-ಮನಗಳಿಗೆ ಶಾಂತಿಯನ್ನು ಮತ್ತು ವಿಶ್ರಾಂತಿಯನ್ನು ನೀಡುತ್ತವೆ. ಯಾವ ಪ್ರವಾಸಿಗರೇ ಆಗಲಿ ಇಲ್ಲಿಗೆ ಆಗಮಿಸಿದ ನಂತರ ಮೂಕ ವಿಸ್ಮಿತಗೊಂಡು ಪ್ರಕೃತಿ ವೈಭವವನ್ನು ವೀಕ್ಷಿಸುತ್ತ ಮೈ ಮರೆಯುತ್ತಾರೆ. ಇದು ಇಲ್ಲಿನ ನೋಡಲೆ ಬೇಕಾದ ಆಕರ್ಷಣೆಯಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed