Search
 • Follow NativePlanet
Share
ಮುಖಪುಟ » ಸ್ಥಳಗಳು» ಕಂಚನಜುಂಗಾ

ಕಂಚನ್ ಜುಂಗಾ - ಮಹೋನ್ನತ ಶಿಖರ ಶೃಂಗ

14

ಕಂಚನ್ ಜುಂಗಾವು ವಿಶ್ವದ ಮೂರನೆ ಅತ್ಯಂತ ದೊಡ್ಡ ಪರ್ವತವಾಗಿದೆ. ಇದು ಭಾರತ- ನೇಪಾಳ ಗಡಿಯಲ್ಲಿ, ಸಮುದ್ರ ಮಟ್ಟದಿಂದ 8586 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಕಂಚನ್ ಜುಂಗಾ ಎಂದರೆ " ಹಿಮದಿಂದ ಕೂಡಿರುವ ಐದು ನಿಧಿಗಳು" ಎಂದರ್ಥ. ಈ ಪರ್ವತವು 5 ಶಿಖರಗಳನ್ನು ಹೊಂದಿದ್ದು, ಇದರಲ್ಲಿರುವ ಪ್ರತಿ ಪರ್ವತವು ಕ್ರಮವಾಗಿ ದೇವರುಗಳಿಗೆ ಸೇರಿದ ಚಿನ್ನ,ಬೆಳ್ಳಿ, ರತ್ನಗಳು, ಧಾನ್ಯಗಳು ಮತ್ತು ಪವಿತ್ರ ಗ್ರಂಥಗಳ ಭಂಡಾರವನ್ನು ಹೊಂದಿವೆ ಎಂದು ನಂಬಲಾಗಿದೆ.

ಇಲ್ಲಿ ಐದು ಶಿಖರಗಳು ಸೇರಿ ಕಂಚನ್ ಜುಂಗಾವನ್ನು ಹುಟ್ಟು ಹಾಕಿವೆ. ಇವುಗಳಲ್ಲಿ ಮೂರು ಅಂದರೆ ಮುಖ್ಯ ಶಿಖರ, ಮಧ್ಯ ಶಿಖರ ಮತ್ತು ದಕ್ಷಿಣ ಭಾಗದ ಶಿಖಗಳು ಭಾರತ ದೇಶದ ಉತ್ತರ ಸಿಕ್ಕಿಂ ಹಾಗು ನೇಪಾಳದ ಟಪ್ಲೆಜುಂಗ್ ಜಿಲ್ಲೆಯ ಗಡಿಗಳಲ್ಲಿ ನೆಲೆ ನಿಂತಿವೆ. ಇನ್ನಿತರ ಎರಡು ಶಿಖರಗಳು ಸಂಪೂರ್ಣವಾಗಿ ನೇಪಾಳ ದೇಶದಲ್ಲಿವೆ. ಇದರ ಜೊತೆಗೆ ಕಂಚನ್ ಜುಂಗಾ ಪ್ರಾಂತ್ಯದಲ್ಲಿ ಈ ಶಿಖರಗಳಲ್ಲದೆ 23,000 ಅಡಿಗಳಷ್ಟು ಎತ್ತರವಿರುವ ಇನ್ನಿತರ 12 ಶಿಖರಗಳು ಸಹ ಇವೆ.

ಕಂಚನ್ ಜುಂಗಾದ ಭೂಪ್ರದೇಶವು ಭೂತಾನ್, ಚೀನಾ, ಭಾರತ ಮತ್ತು ನೇಪಾಳ ರಾಜ್ಯಗಳ ಜೊತೆಗೆ ಗಡಿಯನ್ನು ಹಂಚಿಕೊಂಡಿದೆ. ಇಲ್ಲಿ 14 ಸಂರಕ್ಷಿತ ಪ್ರದೇಶಗಳಿವೆ. ಇವು 2329 ಚ.ಮೀ. ನಷ್ಟು ವ್ಯಾಪಿಸಿವೆ. ಇದರ ಜೊತೆಗೆ ಈ ಪ್ರದೇಶವು ಹಿಮ ಚಿರತೆ, ಏಶಿಯಾದ ಕಪ್ಪು ಕರಡಿ, ಹಿಮಾಲಯನ್ ಕಸ್ತೂರಿ ಮೃಗ, ಕೆಂಪು ಪಾಂಡಾ, ರಕ್ತ ವರ್ಣದ ಫೆಸೆಂಟ್ ಮತ್ತು ಚೆಸ್ಟ್ ನಟ್ ಎದೆಯ ಹದ್ದುಗಳಂತಹ ಅಪರೂಪದ ಜೀವಿಗಳ ಆವಾಸ ಸ್ಥಾನವಾಗಿದೆ. ಅಲ್ಲದೆ ಇಲ್ಲಿ ವಿವಿಧ ಬಗೆಯ ರೋಡೊಡೆಂಡ್ರನ್‍ಗಳು ಮತ್ತು ಆರ್ಕಿಡ್‍ಗಳು ಸಹ ಕಂಡು ಬರುತ್ತವೆ.

ಇತಿಹಾಸ

ಕಂಚನ್ ಜುಂಗಾವು ಕುತೂಹಲಕರವಾದ ಇತಿಹಾಸವನ್ನು ಹೊಂದಿದೆ. 1852ನೇ ಇಸವಿಯವರೆಗು ಕಂಚನ್ ಜುಂಗಾವು ವಿಶ್ವದ ಅತ್ಯಂತ ಎತ್ತರದ ಪರ್ವತವೆಂಬ ಖ್ಯಾತಿಗೆ ಪಾತ್ರವಾಗಿತ್ತು. 1849ರಲ್ಲಿ ನಡೆದ ಐತಿಹಾಸಿಕವಾದ ಭಾರತೀಯ ಟ್ರಿಗೊನೊಮೆಟ್ರಿಕ್ ಸರ್ವೇಯ ಪ್ರಕಾರ ಮೌಂಟ್ ಎವರೆಸ್ಟ್ ವಿಶ್ವದ ಅತ್ಯಂತ ಎತ್ತರದ ಪರ್ವತವಾಗಿ ಸ್ಥಾನ ಪಡೆಯಿತು.1856ರಲ್ಲಿ ಹಲವಾರು ಅಧ್ಯಯನ ಮತ್ತು ಅಳತೆಗಳ ಪ್ರಕಾರ ಕಂಚನ್ ಜುಂಗಾವು ವಿಶ್ವದ ಮೂರನೆಯ ಅತ್ಯಂತ ಎತ್ತರದ ಪರ್ವತವಾಗಿ ಅಧಿಕೃತವಾಗಿ ಘೋಷಿಸಲ್ಪಟ್ಟಿತು.

ಪ್ರವಾಸೋದ್ಯಮ

ಕಂಚನ್ ಜುಂಗಾವು ಇಲ್ಲಿಂದ ಕಾಣಸಿಗುವ ನಯನ ಮನೋಹರವಾದ ಡಾರ್ಜಿಲಿಂಗ್‍ನ ನೋಟಕ್ಕೆ ವಿಶ್ವಖ್ಯಾತಿಯನ್ನು ಪಡೆದಿದೆ. ಇಲ್ಲಿನ ಬೆಟ್ಟಗುಡ್ಡಗಳ ಮೇಲೆ ಚಾರಣ ಮಾಡಲು ಅನುಮತಿಯನ್ನು ತುಂಬಾ ಅಪರೂಪಕ್ಕೆ ನೀಡಲಾಗುತ್ತದೆ. ಹಾಗಾಗಿ ಇಲ್ಲಿನ ಪರಿಸರವು ತನ್ನ ಪರಿಶುಭ್ರತೆಯನ್ನು ಹಾಗೆಯೇ ಉಳಿಸಿಕೊಂಡಿದೆ. ಇದಲ್ಲದೆ ಇಲ್ಲಿನ ಬೆಟ್ಟಗುಡ್ಡಗಳು ದಿನದ ವಿವಿಧ ಅವಧಿಯಲ್ಲಿ ವಿವಿಧ ವರ್ಣದಲ್ಲಿ ಕಂಗೊಳಿಸುತ್ತ ಪ್ರವಾಸಿಗರಿಗೆ ಮುದ ನೀಡುತ್ತಿರುತ್ತದೆ.

ಡಾರ್ಜಿಲಿಂಗ್‍ನಲ್ಲಿರುವ ಯುದ್ಧ ಸ್ಮಾರಕವು ಕಂಚನ್ ಜುಂಗಾ ಪರ್ವತ ಶ್ರೇಣಿಯ ಅದ್ಭುತ ನೋಟಗಳನ್ನು ಒದಗಿಸುತ್ತದೆ. ಮೋಡಗಳು ಮತ್ತು ಮಂಜು ಇಲ್ಲದ ಪರಿಶುಭ್ರ ದಿನಗಳಲ್ಲಿ ನೀವು ಹಿಮಚ್ಛಾಧಿತ ಪರ್ವತ ಶ್ರೇಣಿಯ ಸುಂದರ ನೋಟವನ್ನು ಕಣ್ತುಂಬಿಕೊಳ್ಳಬಹುದು. ಸಿಕ್ಕಿಂನ ಸ್ಥಳೀಯರು ಈ ಪರ್ವತವನ್ನು ಪವಿತ್ರವೆಂದು ಭಾವಿಸುತ್ತಾರೆ.

ಇದರ ಜೊತೆಗೆ ಇಲ್ಲಿ ಗೊಯೆಚ ಲ ಟ್ರೆಕ್ ಮತ್ತು ಗ್ರೀನ್ ಲೇಕ್ ಮುಖಜ ಭೂಮಿಗೆ ಸಾಗುವ ಚಾರಣದ ಹಾದಿಗಳನ್ನು ತೆರೆಯಲಾಗಿದೆ. ಇವು ಇತ್ತೀಚೆಗೆ ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತ ಪ್ರಚಾರಕ್ಕೆ ಬರುತ್ತಿವೆ.

ಕಂಚನಜುಂಗಾ ಪ್ರಸಿದ್ಧವಾಗಿದೆ

ಕಂಚನಜುಂಗಾ ಹವಾಮಾನ

ಕಂಚನಜುಂಗಾ
22oC / 72oF
 • Partly cloudy
 • Wind: S 13 km/h

ಉತ್ತಮ ಸಮಯ ಕಂಚನಜುಂಗಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಕಂಚನಜುಂಗಾ

One Way
Return
From (Departure City)
To (Destination City)
Depart On
24 May,Fri
Return On
25 May,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 May,Fri
Check Out
25 May,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 May,Fri
Return On
25 May,Sat
 • Today
  Kanchenjunga
  22 OC
  72 OF
  UV Index: 4
  Partly cloudy
 • Tomorrow
  Kanchenjunga
  6 OC
  44 OF
  UV Index: 4
  Moderate rain at times
 • Day After
  Kanchenjunga
  6 OC
  43 OF
  UV Index: 4
  Moderate or heavy rain shower