ಸಿಕ್ಕಿಂನಲ್ಲಿರುವ ಅತಿ ಎತ್ತರವಾದ ಶಿಖರಗಳಲ್ಲಿ ಸಿನಿಯೊಲ್ಚು ಶಿಖರವೂ ಒಂದು. ಇದು ಸುಮಾರು 6888 ಮೀ. ಎತ್ತರವಾಗಿದೆ. ಈ ಶಿಖರ ಪರ್ವತವು ಕಂಚನ್ ಜುಂಗಾದ ಹತ್ತಿರದಲ್ಲಿರುವ ಗ್ರೀನ್ ಲೇಕ್ ಎರಿಯಾ ಎಂಬ ಪ್ರದೇಶದ ಬಳಿಯಲ್ಲಿದೆ.
ಈ ಸುಂದರ ಹಿಮಚ್ಛಾದಿತ ಪರ್ವತವು ಅಸಂಖ್ಯಾತ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಇದು ಬರಹಗಾರರ ಮತ್ತು ಕಾದಂಬರಿಕಾರರ ನೆಚ್ಚಿನ ಪರ್ವತವೂ ಕೂಡ ಹೌದು. ಪ್ರಖ್ಯಾತ ಪರ್ವತಾರೋಹಿ ಹಾಗು ಬರಹಗಾರರಾದ ಡಗ್ಲಾಸ್ ಫ್ರೆಷ್ ಫೀಲ್ಡ್ ಅವರು ತಮ್ಮ ಒಂದು ರಚನೆಯಲ್ಲಿ ಈ ಶಿಖರದ ಕುರಿತಾಗಿ ಈ ರೀತಿ ಹೇಳಿದ್ದಾರೆ "ಶಿಖರಗಳ ವಾಸ್ತುಶಿಲ್ಪದಲ್ಲೆ ದಿಗ್ವಿಜಯ ಸಾಧಿಸಿದ ವಿಹಂಗಮ ಹಾಗು ಜಗತ್ತಿನಲ್ಲೆ ಅತಿ ಸುಂದರ ಹಿಮಪರ್ವತ ಇದಾಗಿದೆ ".