ಕೊಂಡೇಶ್ವರ್ ದೇವಾಲಯವು ಶಿವನ ದೇವಾಲಯವಾಗಿದೆ. ಸುಮಾರು 400 ವರ್ಷಗಳಷ್ಟು ಹಿಂದಿನ ಈ ಕಲ್ಲಿನ ದೇವಾಲಯವು ಸುಂದರವಾದ ದಟ್ಟ ಕಾಡು ಮತ್ತು ಪ್ರಾಕೃತಿಕ ಜಲಪಾತಗಳ ನಡುವೆ ನೆಲೆಸಿದೆ. ಈ ಜಲಪಾತವು ಸುರಕ್ಷಿತವಲ್ಲ ಎಂಬುದನ್ನು ನೆನಪಿಡಬೇಕು. ಅಷ್ಟೇ ಅಲ್ಲದೆ ಮಳೆಗಾಲದ ದಿನಗಳಲ್ಲಿ ದೇವಾಲಯದ ಪ್ರಾಂಗಣವು ಜಾರುತ್ತಿರುತ್ತದೆ. ಈ ದೇವಾಲಯದ ಸುತ್ತಲು ಹಲವಾರು ದೇವಾಲಯಗಳನ್ನು ಕಾಣಬಹುದು. ಮಹಾಶಿವರಾತ್ರಿ ಹಬ್ಬವನ್ನು ಇಲ್ಲಿ ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಗುತ್ತದೆ.


Click it and Unblock the Notifications