ಭಬುವಾ ದ ಬಳಿಯಲ್ಲಿರುವ ಕೈಮೂರ್ ವನ್ಯಜೀವಿ ಧಾಮ 1342 ಕಿ.ಮೀ ವ್ಯಾಪಿಸಿದ್ದು ರಾಜ್ಯದ ಅತ್ಯಂತ ದೊಡ್ಡ ವನ್ಯಜೀವಿ ಧಾಮವಾಗಿದೆ ಹಾಗೂ ಇಲ್ಲಿ ಹಲವು ಜಲಪಾತಗಳು ಮತ್ತು ಸರೋವರಗಳೂ ಇವೆ. ಇಲ್ಲಿ ಹುಲಿಗಳು, ಚಿರತೆಗಳು, ಕಾಡು ಹಂದಿಗಳು, ಸಂಬಾರ್ ಜಿಂಕೆಗಳು, ಚಿತಲ್ ಗಳು, ನಾಲ್ಕು ಕೊಂಬಿನ ಜಿಂಕೆ ಮತ್ತು ನೀಲ್ ಗಾಯ್ಸ್ ಇವೆ ಜೊತೆಗೆ ಈ ವನ್ಯಜೀವಿ ಧಾಮ ಸುಮಾರು 70 ತರಹದ ಹಕ್ಕಿಗಳಿಗೆ ವಾಸಸ್ಥಾನವಾಗಿದೆ. ಚಳಿಗಾಲದ ವಲಸೆ ಹೋಗುವ ಸಮಯದಲ್ಲಿ ಇಲ್ಲಿ ಇನ್ನೂ ಹೆಚ್ಚಿನ ಹಕ್ಕಿಗಳನ್ನು ನಾವು ಕಾಣಬಹುದಾಗಿದೆ.
ಅನುಪಮ್ ಸರೋವರ್ ಮತ್ತು ಕಾಲಿದಾಹ್ ನಲ್ಲಿ ಬಗೆ ಬಗೆಯ ಮೀನುಗಳನ್ನು ಕಾಣಬಹುದು. ಇಲ್ಲಿನ ಮುಖ್ಯ ಪ್ರಾಣಿಗಳೆಂದರೆ ಹುಲಿಗಳು, ಚಿರತೆಗಳು, ಕಾಡು ಹಂದಿಗಳು, ಸಂಬಾರ್ ಜಿಂಕೆಗಳು, ಚಿತಲ್ ಗಳು, ನಾಲ್ಕು ಕೊಂಬಿನ ಜಿಂಕೆ ಮತ್ತು ನೀಲ್ ಗಾಯ್ಸ್. ಈ ವನ್ಯಜೀವಿ ಧಾಮ 70 ಕ್ಕೂ ಹೆಚ್ಚಿನ ಹಕ್ಕಿಗಳಿಗೂ ವಾಸಸ್ಥಾನವಾಗಿದೆ. ಇವುಗಳು ಇಲ್ಲಿ ವರ್ಷಪೂರ್ತಿ ಇರುತ್ತವೆ. ಹಾಗೂ ಚಳಿಗಾಲದ, ವಲಸೆಯ ಸಮಯದಲ್ಲಿ ಭೇಟಿ ನೀಡಿದ ಪ್ರವಾಸಿಗಳು ಇನ್ನೂ ಹೆಚ್ಚಿನ ಹಕ್ಕಿಗಳನ್ನು ಕಾಣಬಹುದಾಗಿದೆ. ಇವುಗಳಲ್ಲಿ ಹೆಚ್ಚಿನವು ಮಧ್ಯ ಏಷ್ಯಾ ಪ್ರದೇಶದಿಂದ ಬಂದವುಗಳಾಗಿವೆ. ಈ ವನ್ಯಜೀವಿ ಧಾಮವನ್ನು ಭಬುವಾದಿಂದ ರಸ್ತೆ ಮಾರ್ಗವಾಗಿ ತಲುಪಬಹುದಾಗಿದೆ ಹಾಗೂ ರೈಲು ಮಾರ್ಗವಾಗಿ ತಲುಪುವ ಪ್ರಯಾಣಿಕರಿಗೆ ಮೊಹಾನಿಯಾ ಸಮೀಪದ ರೈಲ್ವೆ ನಿಲ್ದಾಣವಾಗಿದೆ.


Click it and Unblock the Notifications